ಪವಿತ್ರಾ ಗೌಡ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?

ಪವಿತ್ರಾ ಗೌಡ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?

ಮಂಜುನಾಥ ಸಿ.
|

Updated on:Jun 30, 2024 | 6:33 AM

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಅವರ ಪರ ವಕೀಲರು ಇಂದು ಜೈಲಿಗೆ ಭೇಟಿ ನೀಡಿ ಪವಿತ್ರಾ ಅವರನ್ನು ಭೇಟಿಯಾದರು. ಭೇಟಿಯ ಬಳಿಕ ಮಾತನಾಡಿದ ವಕೀಲರು, ಪವಿತ್ರಾ ಗೌಡ ಅವರ ಜಾಮೀನು ಪ್ರಕ್ರಿಯೆ ಕುರಿತು ಮಾತನಾಡಿದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ನಟಿ ಪವಿತ್ರಾ ಗೌಡ ಪರಪ್ಪರ ಅಗ್ರಹಾರದಲ್ಲಿ ಸಮಯ ಕಳೆಯುತ್ತಿದ್ದಾರೆ. ಅವರ ಪರ ವಕೀಲರು ಇಂದು (ಜೂನ್ 29) ಜೈಲಿಗೆ ಆಗಮಿಸಿ ಅವರನ್ನು ಭೇಟಿಯಾದರು. ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಪವಿತ್ರಾ ಗೌಡ ಪರ ವಕೀಲರು, ಪ್ರಕರಣದಲ್ಲಿ ಪವಿತ್ರಾ ಗೌಡ ಅವರದ್ದು ಯಾವುದೇ ಪಾತ್ರವಿಲ್ಲ. ಆದರೆ ಅವರಿಗೆ ಈ ಸ್ಥಿತಿ ಬಂದಿರುವ ಬಗ್ಗೆ ಅವರಿಗೆ ಬೇಸರವಿದೆ. ಘಟನೆ ಬಗ್ಗೆ ಕೇಳೋಣವೆಂದರೆ ಅವರಿಗೆ ಏನೂ ಗೊತ್ತಿಲ್ಲ. ಘಟನೆಯಲ್ಲಿ ಅವರ ಭಾಗಿದಾರಿಕೆಯೇ ಇಲ್ಲ. ಈಗ ಜುಲೈ 4ರ ಬಳಿಕ ಪವಿತ್ರಾ ಗೌಡ ಅವರ ಜಾಮೀನಿಗೆ ಅರ್ಜಿ ಸಲ್ಲಿಸಲಾಗುವುದು ಎಂದಿದ್ದಾರೆ. ಪವಿತ್ರಾ ಗೌಡ ಆರೋಗ್ಯವಾಗಿದ್ದಾರೆ. ಜೈಲಿನಲ್ಲಿ ಇತರರಿಗೆ ಏನು ಸೌಲಭ್ಯಗಳು ಸಿಗುತ್ತಿವೆಯೋ ಅದೇ ಸೌಲಭ್ಯಗಳು ಅವರಿಗೂ ಸಿಗುತ್ತಿವೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 29, 2024 11:12 PM