ಪವಿತ್ರಾ ಗೌಡರನ್ನು ಭೇಟಿಯಾಗಲು ಜೈಲಿಗೆ ಬಂದ ವಕೀಲ ನ್ಯಾಯಾಂಗ ಕಸ್ಟಡಿ ಬಗ್ಗೆ ಉಪನ್ಯಾಸ ನೀಡಿದರು!
ತಾನೇನೂ ಮಾಡಿಲ್ಲ ಆದರೂ ತನಗ್ಯಾಕೆ ಇಂಥ ಸ್ಥಿತಿಯೆಂಬ ಶಾಕ್ ನಲ್ಲಿ ಪವಿತ್ರಾ ಗೌಡ ಇದ್ದಾರೆ, ಅವರ ಜಾಮೀನು ಅರ್ಜು ಸಲ್ಲಿಸುವುದು ಯಾವಾಗ ಅಂತ ಚರ್ಚೆ ಮಾಡಲು ಜೈಲಿಗೆ ಬಂದಿದ್ದು ಅಂತ ವಕೀಲ ನಾರಾಯಣ ಸ್ವಾಮಿ ಹೇಳುತ್ತಾರೆ. ಅದು ಸರಿ; ಆದರೆ ಅವರು ನ್ಯಾಯಾಂಗ ಕಸ್ಟಡಿ ಅಂದರೇನು, ಆರೋಪಿಗಳನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಮೊದಲಾದ ಸಂಗತಿಗಳ ಬಗ್ಗೆ ಉಪನ್ಯಾಸ ಯಾಕೆ ನೀಡಿದರು ಅನ್ನೋದು ಗೊತ್ತಾಗಲಿಲ್ಲ!
ಆನೇಕಲ್ (ಬೆಂಗಳೂರು): ಇದ್ದಕ್ಕಿದ್ದಂತೆ ತನ್ನ ಕಕ್ಷಿದಾರಳು ಪವಿತ್ರಾ ಗೌಡರನ್ನು ಭೇಟಿಯಾಲು ಬಂದಿದ್ದ ಅವರ ವಕೀಲ ನಾರಾಯಣಸ್ವಾಮಿ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತಾಡಿದರು. ತನ್ನ ಕಕ್ಷಿದಾರೆ ನ್ಯಾಯಾಂಗ ಬಂಧನದಲ್ಲಿದ್ದಾರೆ, ಈ ಕಸ್ಟಡಿಯಲ್ಲಿ ಬೇರೆಯವರನ್ನು ಹೇಗಿಟ್ಟಿರುತ್ತಾರೋ ಪವಿತ್ರಾ ಗೌಡರನ್ನೂ ಹಾಗೆಯೇ ಇಡಲಾಗಿದೆ, ಅವರಿಗೆ ಬೇರೆ ರೀತಿಯ ಟ್ರೀಟ್ಮೆಂಟ್ ಏನೂ ಸಿಗುತ್ತಿಲ್ಲ ಎಂದು ವಕೀಲ ಹೇಳಿದರು. ನ್ಯಾಯಾಂಗ ಬಂಧನದಲ್ಲಿರುವವರಿಗೆ ತೊಂದರೆ ಕೊಡೋದಿಲ್ಲ, ಅಲ್ಲಿ ಅವರಿಗೆ ಹಿಂಸೆ ನೀಡಲಾಗುತ್ತದೆ, ವಿಚಾರಣೆ ಮಾಡಲಾಗುತ್ತದೆ ಅನ್ನೋದು ಸುಳ್ಳು, ಆರೋಪಿಗಳ ಮನ ಪರಿವರ್ತನೆಯಾಗಲಿ ಎಂಬ ಉದ್ದೇಶದಿಂದ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿರುತ್ತದೆ. ಬೇರೆಯವರಿಗೆ ಕೊಡುವ ಊಟವನ್ನೇ ಅವರಿಗೂ ಕೊಡಲಾಗುತ್ತದೆ, ಮಾಧ್ಯಮಗಳು ವರದಿ ಮಾಡುವ ಹಾಗೆ ಪವಿತ್ರಾ ಗೌಡಗೆ ಬೇರೆ ಊಟವೇನೂ ನೀಡಲ್ಲ ಎಂದು ನಾರಾಯಣಸ್ವಾಮಿ ಹೇಳಿದರು. ಬೇಲ್ ಸಿಗುವವರೆಗೆ ಅಥವಾ ವಿಚಾರಣೆ ಮುಗುಯುವವರೆಗೆ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲಾಗುತ್ತದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು