ಜೈಲಿನಲ್ಲಿ ದರ್ಶನ್ ಭೇಟಿಯ ಬಳಿಕ ರಕ್ಷಿತಾ-ಪ್ರೇಮ್ ಹೇಳಿದ್ದಿಷ್ಟು?
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯುತ್ತಿರುವ ದರ್ಶನ್ರನ್ನು ಇಂದು ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಭೇಟಿಯಾದರು. ಬಳಿಕ, ಮಾಧ್ಯಮಗಳೊಟ್ಟಿಗೆ ಮಾತನಾಡಿ ರೇಣುಕಾ ಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತಿದ್ದಾರೆ. ಹಲವು ಅಭಿಮಾನಿಗಳು ದರ್ಶನ್ರನ್ನು ಭೇಟಿಯಾಗಲು ಪ್ರತಿನಿತ್ಯ ಜೈಲಿನ ಬಳಿ ಬರುತ್ತಿದ್ದಾರೆ. ಆದರೆ ಪೊಲೀಸರು ಯಾರಿಗೂ ಅವಕಾಶ ನೀಡುತ್ತಿಲ್ಲ. ಕೇವಲ ಕುಟುಂಬ ಸದಸ್ಯರಿಗೆ ಹಾಗೂ ವಕೀಲರಿಗಷ್ಟೆ ಅವಕಾಶ ನೀಡಲಾಗಿದೆ. ಇಂದು ದರ್ಶನ್ರ ಗೆಳೆಯರಾದ ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಅವರುಗಳು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಜೊತೆ ಮಾತನಾಡಿದರು. ದರ್ಶನ್ ಭೇಟಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಕ್ಷಿತಾ ಹಾಗೂ ಪ್ರೇಮ್, ದರ್ಶನ್ ಆರೋಗ್ಯವಾಗಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ರೇಣುಕಾ ಸ್ವಾಮಿ ಆತ್ಮಕ್ಕೆ ಶಾಂತಿ ದೊರಕಲಿ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್ಐಟಿಯಿಂದ ಹೈವೋಲ್ಟೇಜ್ ಸಭೆ

