ಕಮೀಶನ್ ಬೇಡಿಕೆಯಿಡದೆ ಲೋಕೋಪಯೋಗಿ ಇಲಾಖೆಯ ರೂ. 600 ಕೋಟಿ ಮೊತ್ತದ ಬಿಲ್ ಗಳನ್ನು ಕ್ಲೀಯರ್ ಮಾಡಲಾಗಿದೆ: ಕೆಂಪಣ್ಣ

ಅರುಣ್​ ಕುಮಾರ್​ ಬೆಳ್ಳಿ

Updated on: Feb 13, 2024 | 4:40 PM

ಕೇವಲ 5 ದಿನಗಳ ಹಿಂದೆ ಬಿಲ್ ಗಳನ್ನು ಕ್ಲೀಯರ್ ಮಾಡಲು ಅಧಿಕಾರಿಗಳು 40 ಪರ್ಸೆಂಟ್ ಲಂಚ ಕೇಳುತ್ತಿದ್ದಾರೆ ಅಂತ ಕೆಂಪಣ್ಣ ಹೇಳಿದ್ದರು. ಏನ್ಸಾರ್ ಒಂದು ವಾರದೊಳಗೆ ಉಲ್ಟಾ ಹೊಡೀತೀದ್ದೀರಾ ಅಂತ ಮಾಧ್ಯಮಗಳು ಕೇಳಿದಾಗ, ಸಿಡುಕಿದ ಕೆಂಪಣ್ಣ, ತಮ್ಮ ಹೇಳಿಕೆಗೆ ಈಗಲೂ ಬದ್ಧ ಅಂತ ಹೇಳಿ ಪ್ಯಾಕೇಜ್ ಸಿಸ್ಟಂನಲ್ಲಿ ನೀಡುವ ಕಾಮಗಾರಿಗಳಿಗೆ ಕಮೀಶನ್ ಕೇಳಲಾಗುತ್ತಿದೆ, ಅದನ್ನು ರದ್ದು ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾಗಿ ಹೇಳಿದರು.

ಬೆಂಗಳೂರು: ನಗರದರ ಪ್ರೆಸ್ ಕ್ಲಬ್ ನಲ್ಲಿ  ಇಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna), ಲೋಕೋಪಯೋಗಿ ಇಲಾಖೆಯಲ್ಲಿ (PWD) 1 ಕೋಟಿಗಿಂತ ಕಡಿಮೆ ಇರುವ ಎಲ್ಲ ಬಿಲ್ ಗಳು ಕ್ಲೀಯರ್ ಆಗಿವೆ ಎಂದು ಹೇಳಿದರು. ಕಮೀಶನ್ ಗೆ (commission) ಬೇಡಿಕೆ ಇಡದೆ, 1054 ಸಣ್ಣ ಗುತ್ತಿಗೆದಾರರ ಬಿಲ್ ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಕೆಂಪಣ್ಣ ಹೇಳಿದರು. ಅವರು ಸುದ್ದಿಗೋಷ್ಟಿ ನಡೆಸಿ ಲಂಚ ಡಿಮ್ಯಾಂಡ್ ಮಾಡದೆ 600 ಕೋಟಿ ರೂ. ಮೊತ್ತದ ಬಿಲ್ ಗಳು ಕ್ಲೀಯರ್ ಆಗಿವೆ ಅಂತ ಹೇಳಿದ್ದು ಸಹಜವಾಗೇ ಆಶ್ಚರ್ಯ ಹುಟ್ಟಿಸಿತು. ಯಾಕೆಂದರೆ, ಕೇವಲ 5 ದಿನಗಳ ಹಿಂದೆ ಬಿಲ್ ಗಳನ್ನು ಕ್ಲೀಯರ್ ಮಾಡಲು ಅಧಿಕಾರಿಗಳು 40 ಪರ್ಸೆಂಟ್ ಲಂಚ ಕೇಳುತ್ತಿದ್ದಾರೆ ಅಂತ ಹೇಳಿದ್ದರು. ಏನ್ಸಾರ್ ಒಂದು ವಾರದೊಳಗೆ ಉಲ್ಟಾ ಹೊಡೀತೀದ್ದೀರಾ ಅಂತ ಮಾಧ್ಯಮಗಳು ಕೇಳಿದಾಗ, ಸಿಡುಕಿದ ಕೆಂಪಣ್ಣನವರು, ತಮ್ಮ ಹೇಳಿಕೆಗೆ ಈಗಲೂ ಬದ್ಧ ಅಂತ ಹೇಳಿ ಪ್ಯಾಕೇಜ್ ಸಿಸ್ಟಂನಲ್ಲಿ ನೀಡುವ ಕಾಮಗಾರಿಗಳಿಗೆ ಕಮೀಶನ್ ಕೇಳಲಾಗುತ್ತಿದೆ, ಅದನ್ನು ರದ್ದು ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾಗಿ ಹೇಳಿದರು.

ತಮ್ಮ ಬೇಡಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ, ಉಳಿದ ಇಲಾಖೆಗಳಲ್ಲಿ ಬಾಕಿಯಿರುವ ಬಿಲ್ ಗಳನ್ನು ಸಹ ಬಿಡುಗಡೆ ಮಾಡಬೇಕೆಂದು ಅವರನ್ನು ಆಗ್ರಹಿಸಿದ್ದೇವೆ, ಒಂದು ವರ್ಷದೊಳಗಾಗಿ ಬಾಕಿಯಿರುವ ಎಲ್ಲ ಬಿಲ್ ಗಳನ್ನು ಕ್ಲೀಯರ್ ಮಾಡುವ ಭರವಸೆ ಅವರು ನೀಡಿದ್ದಾರೆ ಎಂದು ಕೆಂಪಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿಅ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.