ನಾವು ಯಾವುದೇ ಕಾರಣಕ್ಕೂ ಬಿಲ್ ಕಟ್ಟಲ್ಲ; ಕರೆಂಟ್ ಬಿಲ್ ನೋಡಿ ಜನ ಶಾಕ್, ಸರ್ಕಾರದ ವಿರುದ್ಧ ಆಕ್ರೋಶ
ಪ್ರತಿ ತಿಂಗಳಿಗಿಂತ ದುಪ್ಪಟ್ಟು ಬಿಲ್ ಬಂದಿದ್ದಕ್ಕೆ ಯಾದಗಿರಿ ನಗರದ ಶಹಾಪುರಪೇಟೆಯಲ್ಲಿ ಜನ ಆಕ್ರೋಶಗೊಂಡಿದ್ದಾರೆ. ಪ್ರತಿ ತಿಂಗಳು 800 ರೂ. ಬರ್ತಾಯಿದ್ದ ಬಿಲ್ ಈ ತಿಂಗಳು ಏಕಾಏಕಿ 2400 ಬಂದಿದೆ. ಮೂರು ಪಟ್ಟು ಬಿಲ್ ಜಾಸ್ತಿ ಬಂದಿದ್ದಕ್ಕೆ ಜನ ಗರಂ ಆಗಿದ್ದಾರೆ.
ಗೃಹ ಜ್ಯೋತಿ ಯೋಜನೆ ಜಾರಿಗೂ ಮುನ್ನವೆ ರಾಜ್ಯದ ಜನತೆಗೆ ಕರೆಂಟ್ ಬಿಲ್ ಶಾಕ್ ಹೊಡೆದಿದ್ದು, ಯಾದಗಿರಿ ಜಿಲ್ಲೆಯ ಜನರಿಗೆ ವಿದ್ಯುತ್ ಬಿಲ್ ಏರಿಕೆ ಆಘಾತ ಉಂಟುಮಾಡಿದೆ. ಪ್ರತಿ ತಿಂಗಳಿಗಿಂತ ಈ ತಿಂಗಳು ದುಪ್ಪಟ್ಟು ಬಿಲ್ ಬಂದಿದ್ದು, ಜನ ಆಕ್ರೋಶ ಹೊರ ಹಾಕ್ತಿದ್ದಾರೆ. ಪ್ರತಿ ತಿಂಗಳು 800 ರೂ. ಬರ್ತಿದ್ದ ಬಿಲ್ ಏಕಾಏಕಿ 2400 ಬಂದಿದ್ದು, ನಾವು ಯಾವುದೇ ಕಾರಣಕ್ಕೂ ಬಿಲ್ ಕಟ್ಟಲ್ಲ ಎಂದು ಜನ ಪಟ್ಟು ಹಿಡಿದಿದ್ದಾರೆ.
ಪ್ರತಿ ತಿಂಗಳಿಗಿಂತ ದುಪ್ಪಟ್ಟು ಬಿಲ್ ಬಂದಿದ್ದಕ್ಕೆ ಯಾದಗಿರಿ ನಗರದ ಶಹಾಪುರಪೇಟೆಯಲ್ಲಿ ಜನ ಆಕ್ರೋಶಗೊಂಡಿದ್ದಾರೆ. ಪ್ರತಿ ತಿಂಗಳು 800 ರೂ. ಬರ್ತಾಯಿದ್ದ ಬಿಲ್ ಈ ತಿಂಗಳು ಏಕಾಏಕಿ 2400 ಬಂದಿದೆ. ಮೂರು ಪಟ್ಟು ಬಿಲ್ ಜಾಸ್ತಿ ಬಂದಿದ್ದಕ್ಕೆ ಜನ ಗರಂ ಆಗಿದ್ದಾರೆ. ಸರ್ಕಾರ ವಿದ್ಯುತ್ ಫ್ರೀ ಅಂತ ಹೇಳಿ ನಮಗೆ ಬರೆ ಇಟ್ಟಿದೆ. ನಮಗೆ ಯಾವುದು ಫ್ರೀ ಬೇಡ, ಬಟ್ ಕರೆಂಟ್ ಬಿಲ್ ಕಮ್ಮಿ ಬರಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಯಾವ ಕಾರಣಕ್ಕೆ ಕರೆಂಟ್ ಬಿಲ್ ಜಾಸ್ತಿ ಬಂದಿದೆ ಅಂತ ಹೇಳಬೇಕು. ಪ್ರತಿ ಯೂನಿಟ್‌ಗೆ 7 ರೂ. ಆದ್ರು ಇಷ್ಟು ಬರಲ್ಲ. ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಮಾಹಿತಿ ಕೊಡ್ತಾಯಿಲ್ಲ. ನಾವು ಯಾವುದೇ ಕಾರಣಕ್ಕೂ ಬಿಲ್ ಕಟ್ಟಲ್ಲ ಎಂದು ಗುಡುಗಿದ್ದಾರೆ.