ಠಾಣೆಯಿಂದಲೇ ಕಾಣೆಯಾದ ವ್ಯಕ್ತಿ; ಪೋಲಿಸರ ವಿರುದ್ದ ಪೋಷಕರ ಆಕ್ರೋಶ
ಕುಡಿದು ಲಾರಿ ಚಾಲನೆ ಹಿನ್ನೆಲೆ ಜೂನ್ 4ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆ ಪೊಲೀಸರು ಲಾರಿ ಜಪ್ತಿ ಮಾಡಿ, ಆತನನ್ನ ವಶಕ್ಕೆ ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಕಟ್ಟಿಗೆಹಳ್ಳಿಯ ಲಾರಿ ಚಾಲಕ ಕೆ.ಬಿ.ಬಸವಂತಕುಮಾರ್(36), ಪೊಲೀಸರ ಕಣ್ಣೆದುರೆ ನಾಪತ್ತೆಯಾಗಿದ್ದಾನೆ.
ಚಿತ್ರದುರ್ಗ: ಕುಡಿದು ಲಾರಿ ಚಾಲನೆ ಹಿನ್ನೆಲೆ ಜೂನ್ 4ರಂದು ಚಿತ್ರದುರ್ಗ(Chitradurga)ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆ ಪೊಲೀಸರು ಲಾರಿ ಜಪ್ತಿ ಮಾಡಿ, ಆತನನ್ನ ವಶಕ್ಕೆ ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಕಟ್ಟಿಗೆಹಳ್ಳಿಯ ಲಾರಿ ಚಾಲಕ ಕೆ.ಬಿ.ಬಸವಂತಕುಮಾರ್(36), ಪೊಲೀಸರ ಕಣ್ಣೆದುರೆ ನಾಪತ್ತೆಯಾಗಿದ್ದಾನೆ. ಜೂ.4ರ ರಾತ್ರಿ ಲಾರಿ ಜಪ್ತಿ ಮಾಡಿ ಠಾಣೆಗೆ ಪೊಲೀಸರು ತಂದಿದ್ದರು. ದಂಡ ಕಟ್ಟಲು ಹಣವಿಲ್ಲದೆ ರಾತ್ರಿಯಿಡೀ ಚಾಲಕ ಲಾರಿಯಲ್ಲಿದ್ದ. ಜೂ.5ರ ಬೆಳಗ್ಗೆ 2ಸಲ ಠಾಣೆಯೊಳಗೆ ಬಂದಿದ್ದ ಚಾಲಕ, ಬೆಳಗ್ಗೆ 9ಗಂಟೆಗೆ ತಿಂಡಿ ಸೇವನೆಗೆಂದು ಹೋಗಿದ್ದವ ನಾಪತ್ತೆಯಾಗಿದ್ದಾನೆ. ಈ ವಿಷಯ ತಿಳಿದು ಬಸವಂತಕುಮಾರ್ ಪೋಷಕರಲ್ಲಿ ಆತಂಕ ಮೂಡಿದ್ದು, ಚಾಲಕ ನಾಪತ್ತೆಗೆ ಹೊಳಲ್ಕೆರೆ ಪೊಲೀಸರೇ ಕಾರಣ ಎಂದು ಕಿಡಿಕಾರಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಎಸ್ಪಿ ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
