ಬೀದರ್: ಕಲ್ಲಿನ ನಂದಿ ವಿಗ್ರಹಕ್ಕೆ ಹಾಲು ನೀರು ಕುಡಿಸುತ್ತಿರುವ ಜನರು; ವಿಡಿಯೋ ವೈರಲ್

Edited By:

Updated on: Jul 28, 2023 | 3:29 PM

Bidar News: ಬೀದರ್​​ ಜಿಲ್ಲೆಯ ಬಹುತೇಲ ದೇವಸ್ಥಾನಗಳಲ್ಲಿ ನಂದಿ ವಿಗ್ರಹವು ನೀರು ಮತ್ತು ಹಾಲು ಕುಡಿಯುತ್ತದೆ ಎಂಬ ವಿಚಾರ ಸುದ್ದಿಯಲ್ಲಿದೆ. ನಂದಿ ವಿಗ್ರಹಕ್ಕೆ ನೀರು, ಹಾಲು ಕುಡಿಸಲು ಜನರು ಆಗಮಿಸುತ್ತಿದ್ದು, ಇದರ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗುತ್ತಿದೆ.

ಬೀದರ್, ಜುಲೈ 28: ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ನಂದಿ ವಿಗ್ರಹ ನೀರು ಕುಡಿಯುವ ವದಂತಿ ಹಬ್ಬುತ್ತಿದೆ. ಬೀದರ್ (Bidar) ತಾಲೂಕಿನ ಧೊಮಸಾಪುರ ಮರಕುಂದ ಚಿಟಗುಪ್ಪಾ ತಾಲೂಕಿನ ನಿರ್ಣಾ, ಮಂಗಲಗಿ, ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಸೇರಿದಂತೆ ಹಲವೆಡೆ ಕಲ್ಲಿನ ನಂದಿ ವಿಗ್ರಹಕ್ಕೆ ಜನರು ಹಾಲು ಕುಡಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ನಂದಿ ವಿಗ್ರಹಗಳಿಗೆ ಚಮಚದಿಂದ ನೀರು ಹಾಲು ಕುಡಿಸಲು ಮಹಿಳಾ ಭಕ್ತರು ಮುಗಿ ಬೀಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Jul 28, 2023 03:29 PM