Assembly polls: ಸಿದ್ದರಾಮಯ್ಯನವರ ನಿವಾಸಕ್ಕೆ ಪುನಃ ಆಗಮಿಸಿ ತಮ್ಮ ಕ್ಷೇತ್ರಗಳಿಂದಲೇ ಸ್ಪರ್ಧಿಸಬೇಕೆಂದು ಆಗ್ರಹಿಸುತ್ತಿರುವ ಬಾದಾಮಿ, ವರುಣ ಜನ
ಧರ್ಮಸಂಕಟಕ್ಕೆ ಸಿಲುಕಿರುವ ಸಿದ್ದರಾಮಯ್ಯನವರು ಅಂತಿಮವಾಗಿ ಎಲ್ಲಿಂದ ಸ್ಪರ್ಧಿಸಲಿದ್ದಾರೆ ಅಂತ ಸದ್ಯಕ್ಕಂತೂ ಗೊತ್ತಾಗದು.
ಬೆಂಗಳೂರು: ಮೊದಲಿಗೆ ಚಾಮುಂಡೇಶ್ವರಿ, ಆಮೇಲೆ ಬಾದಾಮಿ ನಂತರ ವರುಣ ಮತ್ತು ಇವತ್ತು ಪುನಃ ಬಾದಾಮಿ ಮತ್ತು ವರುಣ ಕ್ಷೇತ್ರಗಳ ಜನ ಸಿದ್ದರಾಮಯ್ಯನವರ ಮನೆ ಮುಂದೆ! ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತೀವ್ರ ಸ್ವರೂಪದ ಗೊಂದಲಕ್ಕೆ ಬೀಳುವಂತೆ ಮಾಡುತ್ತಿದ್ದಾರೆ ಈ ಜನ. ಬರುವ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಕೋಲಾರದಿಂದ (Kolar) ಸ್ಪರ್ಧಿಸುವುದು ಹೆಚ್ಚು ಕಡಿಮೆ ಖಚಿತವಾಗುತ್ತಿದ್ದಂತೆಯೇ ಮೇಲೆ ತಿಳಿಸಿರುವ ಕ್ಷೇತ್ರಗಳ ಜನ ತಮ್ಮಲ್ಲಿಂದ ಸ್ಪರ್ಧಿಸಬೇಕೆಂದು ಆಗ್ರಹಿಸಿ ಬೆಂಗಳೂರನಲ್ಲಿರುವ ವಿರೋಧ ಪಕ್ಷದ ನಾಯಕನ (Leader of Opposition) ಅಧಿಕೃತ ನಿವಾಸಕ್ಕೆ ಪದೇಪದೆ ಎಡತಾಕುತ್ತಿದ್ದಾರೆ. ಧರ್ಮಸಂಕಟಕ್ಕೆ ಸಿಲುಕಿರುವ ಸಿದ್ದರಾಮಯ್ಯನವರು ಅಂತಿಮವಾಗಿ ಎಲ್ಲಿಂದ ಸ್ಪರ್ಧಿಸಲಿದ್ದಾರೆ ಅಂತ ಸದ್ಯಕ್ಕಂತೂ ಗೊತ್ತಾಗದು.
ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 14, 2023 11:28 AM