ಸ್ಕಾಡಾ ಯೋಜನೆ ವಿಚಾರ: ಮಾಜಿ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಹರಿಹಾಯ್ದ ಶಾಸಕ ರಾಜುಗೌಡ
ಸ್ಕಾಡಾ 2ನೇ ಹಂತದ ಕಾಮಗಾರಿ ಟೆಂಡರ್ ಯಾವಾಗ ಆಗಿದೆ ಗೊತ್ತಾ? 1,050 ಕೋಟಿ ಹಣ ಮಂಜೂರು ಮಾಡಿಸಿದ್ದೇನೆ. ಈ ಕಾಮಗಾರಿ ನೀವಿದ್ದಾಗ ಆಗಿತ್ತು ಅಂದರೇ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. 2018ರಲ್ಲಿ ನಾನು ಶಾಸಕನಾದ ಮೇಲೆ ಕಾಮಗಾರಿ ಟೆಂಡರ್ ಆಗಿದ್ದರೇ ನೀನು ರಾಜಕೀಯದಿಂದ ನಿವೃತ್ತಿ ಆಗುತ್ತೀಯಾ ಎಂದು ಬಿಜೆಪಿ ಶಾಸಕ ರಾಜುಗೌಡ, ಕಾಂಗ್ರೆಸ್ ಶಾಸಕ ಎಂ.ಬಿ ಪಾಟೀಲ್ ಅವರಿಗೆ ಸವಾಲು ಹಾಕಿದ್ದಾರೆ.
ಯಾದಗಿರಿ: ಸ್ಕಾಡಾ 2ನೇ ಹಂತದ ಕಾಮಗಾರಿ ಟೆಂಡರ್ ಯಾವಾಗ ಆಗಿದೆ ಗೊತ್ತಾ? 1,050 ಕೋಟಿ ಹಣ ಮಂಜೂರು ಮಾಡಿಸಿದ್ದೇನೆ. ಈ ಕಾಮಗಾರಿ ನೀವಿದ್ದಾಗ ಆಗಿತ್ತು ಅಂದರೇ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. 2018ರಲ್ಲಿ ನಾನು ಶಾಸಕನಾದ ಮೇಲೆ ಕಾಮಗಾರಿ ಟೆಂಡರ್ ಆಗಿದ್ದರೇ ನೀನು ರಾಜಕೀಯದಿಂದ ನಿವೃತ್ತಿ ಆಗುತ್ತೀಯಾ ಎಂದು ಬಿಜೆಪಿ ಶಾಸಕ ರಾಜುಗೌಡ (BJP MLA Rajugouda), ಕಾಂಗ್ರೆಸ್ ಶಾಸಕ ಎಂ.ಬಿ ಪಾಟೀಲ್ (Congress MLA MB Patil) ಅವರಿಗೆ ಸವಾಲು ಹಾಕಿದ್ದಾರೆ. 2017ರಲ್ಲಿ ಸ್ಕಾಡಾ ಗೇಟ್ಗಳನ್ನು (ನಾರಾಯಣಪುರ ಎಡದಂಡೆ ಕಾಲುವೆಗೆ ಜಿಐಎಸ್ ಆಧಾರಿತ ಸ್ವಯಂಚಾಲಿತ ಯಾಂತ್ರೀಕೃತ ತಂತ್ರಜ್ಞಾನ SCADA (Supervisory Control and data acquisition) ಯೋಜನೆ.) ನಾವು ಉದ್ಘಾಟಿಸಿದ್ದೇವೆ ಎಂಬ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಹರಿಹಾಯ್ದ ರಾಜಯಗೌಡ ನಿನ್ನ ತರಹ ನಾನು ಪುಕ್ಕಟೆ ಮಾತನಾಡುವುದಿಲ್ಲ. 2017ರಲ್ಲೇ ಕಾಮಗಾರಿ ಆಗಿದ್ದರೇ ರಾಜಕೀಯದಿಂದ ನಿವೃತ್ತಿ ಪಡೆದು, ನಿಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಅಂತ ನಾನೇ ಪ್ರಚಾರ ಮಾಡುತ್ತೇನೆ. ಇಲ್ಲದಿದ್ದರೇ ನಾನು ಹಾಕಿದ ಸವಾಲು ನೀನು ಸ್ವೀಕರಿಸು ಎಂದಿದ್ದಾರೆ.
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ

