ಶಿರಾದಲ್ಲಿ ಜೆಡಿ(ಎಸ್) ಮುಖಂಡ ಉಚಿತ ಹೆಲ್ಮೆಟ್ ವಿತರಿಸುವಾಗ ವಾಹನವಿಲ್ಲದವರೂ ಮುಗಿಬಿದ್ದರು!

ನಿರೀಕ್ಷೆಗೆ ಮೀರಿದ ಜನ ಜಮಾಯಿಸಿದ್ದರಿಂದ ಉಗ್ರೇಶ್ ವಿತರಣಾ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿ ಅಲ್ಲಿಂದ ಹೊರಟರು.

TV9kannada Web Team

| Edited By: Arun Belly

Nov 21, 2022 | 12:14 PM

ತುಮಕೂರು:  ನಮ್ಮ ಜಾಯಮಾನವೇ ಹಾಗೆ ಮಾರಾಯ್ರೇ, ಪುಗ್ಸಟ್ಟೆ ಅಂದರೆ ನಂಗೊದಿಷ್ಟು ನಮ್ಮಪ್ಪನಿಗೊಂದಿಷ್ಟು ಅಂತೀವಿ. ಇಲ್ಲಿ ನೋಡಿ, ತುಮಕೂರು ಜಿಲ್ಲೆ ಶಿರಾದ (Sira) ಐಬಿ ಸರ್ಕಲ್ ನಲ್ಲಿ ಜೆಡಿ(ಎಸ್) ಮುಖಂಡ ಉಗ್ರೇಶ್ (Ugresh) ಸಾರ್ವಜನಿಕರಿಗೆ ಉಚಿತವಾಗಿ ಹೆಲ್ಮೆಟ್ ಹಂಚುತ್ತಿದ್ದಾರೆ. ಹೆಲ್ಮೆಟ್ ಗಳನ್ನು (Helmet ) ಒಂದು ವ್ಯಾನಲ್ಲಿ ತುಂಬಿಕೊಂಡು ತರಲಾಗಿದ್ದು ಜನ ಹೆಲ್ಮೆಟ್ ಗಾಗಿ ಮುಗಿಬಿದ್ದಿದ್ದಾರೆ. ವಾಹನವಿಲ್ಲದವರೂ ಹೆಲ್ಮೆಟ್ ಕೇಳುತ್ತಿದ್ದಾರೆ. ನಿರೀಕ್ಷೆಗೆ ಮೀರಿದ ಜನ ಜಮಾಯಿಸಿದ್ದರಿಂದ ಉಗ್ರೇಶ್ ವಿತರಣಾ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿ ಅಲ್ಲಿಂದ ಹೊರಟರು.

Follow us on

Click on your DTH Provider to Add TV9 Kannada