ಜೆಡಿಎಸ್ ಪಕ್ಷವನ್ನು ನಡೆಸುವ ಕುಟುಂಬ ನನಗೆ ಯಾವಮಟ್ಟಿಗೆ ಕಾಟ ಕೊಟ್ಟಿದೆ ಅಂತ ಎಲ್ಲರಿಗೂ ಗೊತ್ತಿದೆ: ಕೆಸಿ ನಾರಾಯಣಗೌಡ, ಬಿಜೆಪಿ ನಾಯಕ

|

Updated on: Oct 11, 2023 | 7:08 PM

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೆಲಸಗಳನ್ನು ಮೆಚ್ಚಿ ಅಕ್ಕ (ಸುಮಲತಾ) ಬಿಜೆಪಿಗೆ ಸಹಕಾರ ನೀಡುತ್ತ್ತಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಎಲ್ ಸಂತೋಷ್ ಮೊದಲಾದ ಅಗ್ರಗಣ್ಯ ನಾಯಕರು ಅಕ್ಕನೊಂದಿಗೆ ಸಂಪರ್ಕದಲ್ಲಿದ್ದು, ಮಂಡ್ಯ ಕ್ಷೇತ್ರಕ್ಕೆ ಏನು ಮಾಡಬಹುದು, ಕರ್ನಾಟಕಕ್ಕೆ ಏನು ಮಾಡಬಹುದು ಅಂತ ಸಲಹೆ ಕೇಳುತ್ತಿರುತ್ತಾರೆ ಎಂದು ಅವರು ಹೇಳಿದರು.

ಮಂಡ್ಯ: ನಗರಲ್ಲಿಂದು ಬಿಜೆಪಿ ಮಾಜಿ ಶಾಸಕ ಕೆಸಿ ನಾರಾಯಣ ಗೌಡ (KC Narayana Gowda) ಮತ್ತು ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಜಂಟಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದರು. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಬಗ್ಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ ನಾರಾಯಣ ಗೌಡ ಜೆಡಿಎಸ್ ಪಕ್ಷದಿಂದ ಹೊರಬಂದ ತಮಗೆ ಅದನ್ನು ನಡೆಸುವ ಕುಟುಂಬ ಎಷ್ಟು ಕಾಟ ಕೊಟ್ಟಿತು ಅಂತ ಎಲ್ಲರಿಗೂ ಗೊತ್ತಿದೆ, ಅಂತ ಪಕ್ಷದೊಂದಿಗೆ ಬಿಜೆಪಿ ನಾಯಕರು ಮಾಡಿಕೊಂಡಿರುವ ದೋಸ್ತಿಯನ್ನು ಪ್ರಶ್ನಿಸುವ ಹಕ್ಕು ಕಾರ್ಯಕರ್ತನಾದ ತನಗಿದೆ ಎಂದು ಹೇಳಿದರು. ವಿಧಾನ ಸಭಾ ಚುನಾವಣೆ ಸಂದರ್ಭದಲ್ಲ ಮಂಡ್ಯ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಸುಮಲತಾ ಅವರು ಎಡೆಬಿಡದೆ ಪ್ರಚಾರ ಮಾಡಿದ್ದನ್ನು ನಾರಾಯಣ ಗೌಡರು ಕೃತಜ್ಞತೆಯಿಂದ ನೆನೆದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಕೆಲಸಗಳನ್ನು ಮೆಚ್ಚಿ ಅಕ್ಕ (ಸುಮಲತಾ) ಬಿಜೆಪಿಗೆ ಸಹಕಾರ ನೀಡುತ್ತ್ತಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಎಲ್ ಸಂತೋಷ್ ಮೊದಲಾದ ಅಗ್ರಗಣ್ಯ ನಾಯಕರು ಅಕ್ಕನೊಂದಿಗೆ ಸಂಪರ್ಕದಲ್ಲಿದ್ದು, ಮಂಡ್ಯ ಕ್ಷೇತ್ರಕ್ಕೆ ಏನು ಮಾಡಬಹುದು, ಕರ್ನಾಟಕಕ್ಕೆ ಏನು ಮಾಡಬಹುದು ಅಂತ ಸಲಹೆ ಕೇಳುತ್ತಿರುತ್ತಾರೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ