ಧನ್ಯಾ ರಾಮ್ಕುಮಾರ್ ನಟನೆಯ ‘ಕಾಲಾಪತ್ಥರ್’ ಸಾಂಗ್ ಕೇಳಿ ತಾಯಿ ಪೂರ್ಣಿಮಾ ಹೇಳಿದ್ದೇನು?
‘ಕಾಲಾಪತ್ಥರ್’ ಸಿನಿಮಾದ ಲಿರಿಕಲ್ ವಿಡಿಯೋವನ್ನು ಬುಧವಾರ (ಅ.11) ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಧನ್ಯಾ ರಾಮ್ಕುಮಾರ್ ಅವರ ತಾಯಿ ಪೂರ್ಣಿಮಾ, ಹಿರಿಯ ನಟಿ ತಾರಾ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಆಗಮಿಸಿ ಶುಭ ಕೋರಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ..
ಡಾ. ರಾಜ್ಕುಮಾರ್ (Dr Rajkumar) ಕುಟುಂಬದ ಕುಡಿ ಧನ್ಯಾ ರಾಮ್ಕುಮಾರ್ (Dhanya Ramkumar) ಅವರು ‘ಕಾಲಾಪತ್ಥರ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬುಧವಾರ (ಅ.11) ಈ ಸಿನಿಮಾದ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಧನ್ಯಾ ರಾಮ್ಕುಮಾರ್ ಅವರ ತಾಯಿ ಪೂರ್ಣಿಮಾ, ಹಿರಿಯ ನಟಿ ತಾರಾ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಆಗಮಿಸಿ ಶುಭ ಕೋರಿದರು. ಮಗಳ ಸಿನಿಮಾದ ಬಗ್ಗೆ ಪೂರ್ಣಿಮಾ ಅವರು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ‘ಈ ಸೌಂಡ್ ಕೇಳಿದ ಮೇಲೆ ನನಗೆ ಅನಿಸುತ್ತಿರುವುದು ಒಂದೇ. ಧನ್ಯನಿಗೆ ಈ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದ್ದು ಅವಳ ಭಾಗ್ಯ. ತುಂಬ ಚೆನ್ನಾಗಿ ಮೂಡಿಬಂದಿದೆ. ಈ ಸಿನಿಮಾದ ನಿರ್ಮಾಪಕರು ಹಾಗೂ ಇಡೀ ತಂಡಕ್ಕೆ ಒಳ್ಳೆಯ ಭವಿಷ್ಯ ಸಿಗಲಿ’ ಎಂದು ಪೂರ್ಣಿಮಾ (Poornima) ಹಾರೈಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos