ಚಾಮರಾಜನಗರ: ಚಿರತೆಯನ್ನು ತೀರ ಹತ್ತಿರದಿಂದ ಮೊಬೈಲ್ ಫೋನಲ್ಲಿ ಸೆರೆಹಿಡಿದು ಹುಚ್ಚು ಸಾಹಸ ಪ್ರದರ್ಶಿಸಿದ ಕಾರು ಪ್ರಯಾಣಿಕರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 17, 2022 | 10:38 AM

ಕಾರಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ಬೇಟೆಗಾಗಿ ಹೊಂಚುಹಾಕುತ್ತಿದ್ದ ಚಿರತೆಯೊಂದನ್ನು ತೀರ ಹತ್ತಿರದಿಂದ ಮೊಬೈಲ್ ಫೋನಲ್ಲಿ ಸೆರೆಹಿಡಿದು ಹುಚ್ಚು ಸಾಹಸ ಪ್ರದರ್ಶಿಸಿದ್ದಾರೆ.

ಚಾಮರಾಜನಗರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಚಿರತೆ ದಾಳಿಗಳ ಬಗ್ಗೆ ಟಿವಿ9 ನೆಟ್ ವರ್ಕ್ ನಿರಂತರವಾಗಿ ವರದಿ ಮಾಡುತ್ತಿದೆ. ಗುಂಡ್ಲುಪೇಟೆ (Gundlupet) ತಾಲ್ಲೂಕಿನ ಹುಲ್ಲೇಪುರ ಗ್ರಾಮದ ಸದಾಶಿವಮೂರ್ತಿ (Sadashivamurthy) ಹೆಸರಿನ ವ್ಯಕ್ತಿಯ ಜಮೀನಿನಲ್ಲಿ ಬೇಟೆಗಾಗಿ ಹೊಂಚುಹಾಕುತ್ತಿದ್ದ ಚಿರತೆಯೊಂದನ್ನು (leopard) ಕಾರಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ತೀರ ಹತ್ತಿರದಿಂದ ಮೊಬೈಲ್ ಫೋನಲ್ಲಿ ಸೆರೆಹಿಡಿದು ಹುಚ್ಚು ಸಾಹಸ ಪ್ರದರ್ಶಿಸಿದ್ದಾರೆ. ಚಿರತೆ ಅಲ್ಲಿಂದ ಸುಮ್ಮನೆ ಹೋಗುವುದನ್ನು ನೋಡಿದರೆ ಅವರ ಅದೃಷ್ಟ ಚೆನ್ನಾಗಿತ್ತು ಅನಿಸುತ್ತದೆ ಮಾರಾಯ್ರೇ. ಯಾಕೆಂದರೆ ಹುಲಿ, ಚಿರತೆಯಂಥ ವ್ಯಾಘ್ರಗಳು ಹಿಂದೆಮುಂದೆ ನೋಡದೆ ಆಕ್ರಮಣ ಮಾಡುತ್ತವೆ. ಕಾಡುಪ್ರಾಣಿಗಳೊಂದಿಗೆ ಈ ಬಗೆಯ ವ್ಯವಹಾರ ಅಪಾಯಕಾರಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ