ಪಿಎಫ್ಐ ಸಂಘಟನೆ ರಾಮಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದು ಅದರ ದುಷ್ಟತನವನ್ನು ಸೂಚಿಸುತ್ತದೆ: ಪ್ರಮೋದ್ ಮುತಾಲಿಕ್

Edited By:

Updated on: Oct 20, 2022 | 1:49 PM

ಭಾರತದಲ್ಲಿ ಹುಟ್ಟಿ ಇಲ್ಲಿಯ ಅನ್ನ ತಿಂದು ಹಿಂದೂಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಬೇಕೆಂದಿದ್ದ ಅವರ ಯೋಚನೆ ಹೇಸಿಗೆ ಹುಟ್ಟಿಸುತ್ತದೆ ಎಂದು ಮುತಾಲಿಕ್ ಹೇಳಿದರು

ಹಾವೇರಿ: ಈಗಾಗಲೇ 5-ವರ್ಷಗಳ ಅವಧಿಗೆ ನಿಷೇಧಕ್ಕೊಳಗಾಗಿರುವ ಪಾಪ್ಯುಲರ್ ಫ್ರಂಟ್ ಸಂಘಟನೆಯ (PFI) ಹಲವಾರು ವಿಧ್ವಂಸಕಾರಿ ಯೋಜನೆಗಳಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರ ವನ್ನು ಸ್ಪೋಟಿಸಿ ಬಾಬ್ರಿ ಮಸೀದಿಯನ್ನು ಪುನರ್ ನಿರ್ಮಾಣ ಮಾಡಬೇಕೆನ್ನುವುದೂ ಒಂದಾಗಿತ್ತು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದ ಮೇಲೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಮಾತಾಡಿದ್ದಾರೆ. ಭಾರತದಲ್ಲಿ ಹುಟ್ಟಿ ಇಲ್ಲಿಯ ಅನ್ನ ತಿಂದು ಹಿಂದೂಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರ (Islamic country) ಮಾಡಬೇಕೆಂದಿದ್ದ ಅವರ ಯೋಚನೆ ಹೇಸಿಗೆ ಹುಟ್ಟಿಸುತ್ತದೆ. ಅವರಲ್ಲಿ ಅದೆಷ್ಟು ಸೊಕ್ಕು, ದುರಹಂಕಾರ, ರಾಷ್ಟ್ರ ವಿರೋಧಿ ಸಂಚುಗಳು ಮನೆ ಮಾಡಿದ್ದವು ಅನ್ನೋದು ಇದರಿಂದ ಗೊತ್ತಾಗುತ್ತದೆ ಎಂದು ಮುತಾಲಿಕ್ ಹೇಳಿದರು.