Rain Effect: ಮಳೆ ಆರ್ಭಟಕ್ಕೆ ಕೋಟೆ ನಾಡಿನಲ್ಲಿ ಶಾಲೆ, ತೋಟ ಸಂಪೂರ್ಣ ಜಲಾವೃತ
ಚಿತ್ರದುರ್ಗದಲ್ಲಿ ಭಾರಿ ಮಳೆಯಿಂದಾಗಿ ಸರ್ಕಾರಿ ಶಾಲೆ, ತೋಟ ಜಲಾವೃತವಾಗಿದೆ. ಇದರಿಂದ ಶಾಲೆ ಮಕ್ಕಳ ಓದಿಗೆ ಸಮಸ್ಯೆಯಾಗಿದೆ. ರೈತರು ಬೆಳೆ ಹಾನಿಯಿಂದ ಸಂಕಷ್ಟಕ್ಕೀಡಾಗಿದ್ದಾರೆ.
ಚಿತ್ರದುರ್ಗ: ರಾಜ್ಯದ ಹಲವು ಕಡೆ ಭಾರಿ ಮಳೆಯಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮದ್ದೇರು ಗ್ರಾಮದ ಬಳಿ ಹಳ್ಳ ತುಂಬಿ ಹರಿದ ಪರಿಣಾಮ ಹಳ್ಳದ ಬಳಿಯ ತೋಟ, ಜಮೀನುಗಳಿಗೆ ನೀರು ನುಗ್ಗಿ ಬೆಳೆಹಾನಿಯಾಗಿದೆ. ಜೊತೆಗೆ ಸರ್ಕಾರಿ ಶಾಲೆಗೂ ನೀರು ನುಗ್ಗಿದ್ದು ಶಾಲೆ ಕಟ್ಟದ ಕಾಲುಭಾಗ ಮುಳುಗಿದೆ. ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
Published on: Oct 20, 2022 02:39 PM
Latest Videos