PM Modi in Bengaluru: ಪ್ರಧಾನಿಗಳಿಗೆ ಹಲವು ಪ್ರಶ್ನೆಗಳನ್ನು ಕೇಳಿರುವ ಸಿದ್ದರಾಮಯ್ಯ ಉತ್ತರ ಬಯಸಿದ್ದಾರೆ

Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 11, 2022 | 1:55 PM

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಕೆಲವು ಪ್ರಶ್ನೆಗಳನ್ನು ಪ್ರಧಾನಿಗಳ ಮುಂದಿಟ್ಟು #AnswerMadiModi ಅಂತ ಅಭಿಯಾನ ನಡೆಸುತ್ತಿದ್ದಾರೆ.

ಬೆಂಗಳೂರು:  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಶುಕ್ರವಾರದಂದು ಬೆಂಗಳೂರಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಅವರಿಗೆ ಎಲ್ಲೆಡೆ ಅದ್ದೂರಿಯ ಸ್ವಾಗತ ಸಿಗುತ್ತಿದೆ. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಕೆಲವು ಪ್ರಶ್ನೆಗಳನ್ನು ಪ್ರಧಾನಿಗಳ ಮುಂದಿಟ್ಟು #AnswerMadiModi ಅಂತ ಅಭಿಯಾನ ನಡೆಸುತ್ತಿದ್ದಾರೆ. 2018ರಲ್ಲಿ ರೂ 2.42 ಲಕ್ಷ ಕೋಟಿ ಇದ್ದ ಕರ್ನಾಟಕದ ಸಾಲದ ಮೊತ್ತ ಈಗ ರೂ. 5.40 ಲಕ್ಷ ಕೋಟಿ ಆಗಿದೆ ಇದಕ್ಕೆ ಹೊಣೆ ಯಾರು? ಸಚಿವ ಎಸ್ ಟಿ ಸೋಮಶೇಖರ್ (ST Somashekhar) ವಿರುದ್ಧ ಭ್ರಷ್ಟಾಚಾರದ ಅರೋಪ ಕೇಳಿ ಬಂದಿದೆ. ಹೈಕೋರ್ಟ್ ತನಿಖೆ ನಡೆಸಲು ಲೊಕಾಯುಕ್ತ ಪೊಲೀಸ್ ಸೂಚನೆ ನೀಡಿದೆ, ‘ನಾ ಖಾವೂಂಗಾ ನಾ ಖಾನೆ ದೂಂಗಾ’ ಅನ್ನುವ ನಿಮ್ಮ ಘೋಷಣೆ ಏನಾಯ್ತು…? ಹೀಗೆ ಹಲವು ಪ್ರಶ್ನೆಗಳನ್ನು ಸಿದ್ದರಾಮಯ್ಯನವರು ಪ್ರಧಾನಿಗಳಿಗೆ ಕೇಳಿದ್ದಾರೆ.