PM Modi in Bengaluru: ಕೆಂಪೇಗೌಡರ ಪೇಟ ತೊಟ್ಟು ಕಂಗೊಳಿಸಿದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ಮೋದಿ ಅವರಿಗೆ ಕೆಂಪೇಗೌಡರು ಧರಿಸುತ್ತಿದ್ದ ರೀತಿಯ ವಿಶೇಷವಾದ ಪೇಟವನ್ನು ಉಡುಗೊರೆಯಾಗಿ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕೆಂಪೇಗೌಡ ಪೇಟವನ್ನು ಪ್ರಧಾನಿ ಮೋದಿಗೆ ತೊಡಿಸಿದ್ದಾರೆ.
ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್, ಕೆಂಪೇಗೌಡರ ಪುತ್ಥಳಿ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಉದ್ಘಾಟನೆ ಮಾಡಿರುವ ಪ್ರಧಾನಿ ಮೋದಿ (PM Narendra Modi) ಅವರಿಗೆ ಕೆಂಪೇಗೌಡರು ಧರಿಸುತ್ತಿದ್ದ ರೀತಿಯ ವಿಶೇಷವಾದ ಪೇಟವನ್ನು (Kempegowda Peta) ಉಡುಗೊರೆಯಾಗಿ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಈ ಕೆಂಪೇಗೌಡ ಪೇಟವನ್ನು ಪ್ರಧಾನಿ ಮೋದಿಗೆ ತೊಡಿಸಿದ್ದಾರೆ. ಈ ವೇಳೆ ನಿರ್ಮಲಾನಂದನಾಥ ಸ್ವಾಮೀಜಿ ಆ ಪೇಟದ ಮಹತ್ವದ ಬಗ್ಗೆ ನರೇಂದ್ರ ಮೋದಿಯವರಿಗೆ ತಿಳಿಸಿಕೊಟ್ಟಿದ್ದಾರೆ. ಕೆಂಪು ಬಣ್ಣದ ಈ ವಿಶೇಷ ಪೇಟವನ್ನು ಮೈಸೂರಿನ ಕಲಾವಿದ ನಂದನ್ ಎಂಬುವವರು ತಯಾರಿಸಿದ್ಧಾರೆ. ಕಲಾವಿದ ನಂದನ್ ಈ ಪೇಟ ತಯಾರಿಗೆ 10 ದಿನ ತೆಗೆದುಕೊಂಡಿದ್ದಾರೆ. ಬನಾರಸ್ ರೇಷ್ಮೆ ಬಟ್ಟೆ ಬಳಸಿ ಈ ಪೇಟವನ್ನು ತಯಾರಿಸಲಾಗಿದೆ. ಕೆಂಪು ಬಣ್ಣದ ಪೇಟದಲ್ಲಿ ರೇಷ್ಮೆ, ಗರಿ, ಮುತ್ತುಗಳು ಸೇರಿ ಸೂಕ್ಷ್ಮ ಕುಸುರಿ ಕೆಲಸ ಇದರಲ್ಲಿದೆ.
Published on: Nov 11, 2022 02:17 PM
Latest Videos