Loading video

ಆರ್​ಜೆಡಿ, ಕಾಂಗ್ರೆಸ್​ ಸೃಷ್ಟಿಸಿದ್ದ ಜಂಗಲ್​​ರಾಜ್​ಗೆ ಬಿಹಾರ ಜನತೆ ಅಂತ್ಯ ಹಾಡಿದ್ದಾರೆ: ಮೋದಿ

Updated on: Jun 20, 2025 | 2:17 PM

ಬಿಹಾರದಲ್ಲಿ ಕಾಂಗ್ರೆಸ್​ ಹಾಗೂ ಆರ್​ಜೆಡಿ ಸೃಷ್ಟಿಸಿದ್ದ ಜಂಗಲ್​​ರಾಜ್​ಗೆ ಜನತೆ ಅಂತ್ಯ ಹಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಹಾರದ ಸಿವಾನ್​ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್​ ಹಾಗೂ ಆರ್​ಜೆಡಿ ರಾಜ್ಯವನ್ನು ಕಾನೂನುಬಾಹಿರತೆ, ಬಡತನ ಹಾಗೂ ಸಾಮೂಹಿಕ ವಲಸೆಯಿಂದ ಕೂಡಿದ ಜಂಗಲ್​​ರಾಜ್​ಗೆ ತಳ್ಳಿತ್ತು. ಆ ಕರಾಳ ಅಧ್ಯಾಯವನ್ನು ಕೊನೆಗೊಳಿಸಿದ್ದಕ್ಕಾಗಿ ಬಿಹಾರದ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ಪಾಟ್ನಾ, ಜೂನ್ 20: ಬಿಹಾರದಲ್ಲಿ ಕಾಂಗ್ರೆಸ್​ ಹಾಗೂ ಆರ್​ಜೆಡಿ ಸೃಷ್ಟಿಸಿದ್ದ ಜಂಗಲ್​​ರಾಜ್​ಗೆ ಜನತೆ ಅಂತ್ಯ ಹಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಹಾರದ ಸಿವಾನ್​ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್​ ಹಾಗೂ ಆರ್​ಜೆಡಿ ರಾಜ್ಯವನ್ನು ಕಾನೂನುಬಾಹಿರತೆ, ಬಡತನ ಹಾಗೂ ಸಾಮೂಹಿಕ ವಲಸೆಯಿಂದ ಕೂಡಿದ ಜಂಗಲ್​​ರಾಜ್​ಗೆ ತಳ್ಳಿತ್ತು. ಆ ಕರಾಳ ಅಧ್ಯಾಯವನ್ನು ಕೊನೆಗೊಳಿಸಿದ್ದಕ್ಕಾಗಿ ಬಿಹಾರದ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ಆರ್‌ಜೆಡಿ-ಕಾಂಗ್ರೆಸ್ ಅಭಿವೃದ್ಧಿ ವಿರೋಧಿ, ಹೂಡಿಕೆ ವಿರೋಧಿ, ಗೂಂಡಾಗಿರಿ ಭ್ರಷ್ಟಚಾರ ಮಾಡಿಕೊಂಡೇ ಬಂದಿದ್ದಾರೆ. ಎನ್‌ಡಿಎ ಯಾವ ರೀತಿಯ ಬಿಹಾರವನ್ನು ನಿರ್ಮಿಸುತ್ತಿದೆ ಎಂಬುದನ್ನು ಸಾರ್ವಜನಿಕರು ನೋಡುತ್ತಿದ್ದಾರೆ. ಬಿಹಾರದಲ್ಲಿ ದೊಡ್ಡ ಮೇಡ್ ಇನ್ ಇಂಡಿಯಾ ಕೇಂದ್ರವನ್ನು ನಿರ್ಮಿಸಲಾಗುವುದು. ಬಿಹಾರದ ಸರಕುಗಳನ್ನು ರಫ್ತು ಮಾಡಲಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ