ರೋಡ್ ಶೋ ವೇಳೆ ಪುಟ್ಟ ಬಾಲಕನಿಗೆ ಸೆಲ್ಯೂಟ್ ಹೊಡೆದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರು ಇಂದು ಗುಜರಾತ್ಗೆ ಭೇಟಿ ನೀಡಿದ್ದು, ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಇದಕ್ಕೂ ಮುನ್ನ ಅವರು ಭಾವನಗರದಲ್ಲಿ ರೋಡ್ ಶೋ ನಡೆಸಿದ್ದಾರೆ. ಮೋದಿ ಅವರನ್ನು ನೋಡಲು ರಸ್ತೆಗಳಲ್ಲಿ ಸಾವಿರಾರೂ ಕಾರ್ಯಕರ್ತರು, ಜನರು ಜಮಾಯಿಸಿದರು. ಈ ವೇಳೆ ಒಂದು ವಿಶೇಷ ಘಟನೆ ನಡೆದಿದೆ. ಅದೇನು ಎಂಬುದು ಇಲ್ಲಿದೆ ನೋಡಿ.
ಗುಜರಾತ್, ಸೆ.20: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಗುಜರಾತ್ನಲ್ಲಿ 34,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇದಕ್ಕೂ ಮುನ್ನ ಅವರು ಗುಜರಾತ್ನ ಭಾವನಗರದಲ್ಲಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ರಸ್ತೆ ಬದಿಯಲ್ಲಿ ನಿಂತಿದ್ದ ಸಾವಿರಾರೂ ಜನರತ್ತ ಕೈಬಿಸಿದ್ದಾರೆ. ಈ ಸಂದರ್ಭದಲ್ಲಿ ಪುಟ್ಟ ಬಾಲಕನೊಬ್ಬ ಮೋದಿ ಅವರನ್ನು ನೋಡಿ ಸೆಲ್ಯೂಟ್ ಮಾಡಿದ್ದಾನೆ. ಇದಕ್ಕೆ ಪ್ರಧಾನಿ ಮೋದಿ ಅವರು ಕೂಡ ಪ್ರತಿಕ್ರಿಯಿಸಿ, ಆ ಹುಡುಗನಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಧಾನಿ ಮೋದಿ ಸೆಲ್ಯೂಟ್ ಮಾಡಿರುವ ಬಗ್ಗೆ ಅಲ್ಲೇ ಪಕ್ಕದಲ್ಲಿ ನಿಂತಿದ್ದ ತನ್ನ ತಾಯಿ ಬಳಿ ಹೇಳಿ ಖುಷಿಪಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಪ್ರಧಾನಿ ನನಗೆ ಸೆಲ್ಯೂಟ್ ಹೊಡೆದರು ಎಂಬ ಖುಷಿಯಲ್ಲಿ ಹುಡುಗ ಕುಣಿದಾಡಿದ್ದಾನೆ. ಇನ್ನು ಪ್ರಧಾನಿ ಮೋದಿ ಅವರು ಅಷ್ಟೊಂದು ಜನರ ಮಧ್ಯೆ ಆ ಬಾಲಕನತ್ತ ಗಮನ ನೀಡಿರುವುದು ವಿಶೇಷವಾಗಿತ್ತು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ