International Yoga Day 2024: ಶ್ರೀನಗರದ ದಾಲ್ ಸರೋವರದ ತಟದಲ್ಲಿ ಮೋದಿ ಯೋಗ
International Yoga Day Narendra Modi: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಶ್ರೀನಗರದ ದಾಲ್ ಸರೋವರದ ತಟದಲ್ಲಿ ಶೇರ್-ಐ-ಕಾಶ್ಮೀರ್ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ (ಎಸ್ಜೆಐಸಿಸಿ) ಆಯೋಜಿಸಿರುವ 10ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ 7 ಸಾವಿರಕ್ಕೂ ಹೆಚ್ಚು ಜನರು ಮೋದಿಯವರೊಂದಿಗೆ ಯೋಗ ಮಾಡುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇಂದು (ಜೂನ್ 21) ಶ್ರೀನಗರದ ದಾಲ್ ಸರೋವರದ ತಟದಲ್ಲಿ ಶೇರ್-ಐ-ಕಾಶ್ಮೀರ್ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ (ಎಸ್ಜೆಐಸಿಸಿ) ಆಯೋಜಿಸಿರುವ 10ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ 7 ಸಾವಿರಕ್ಕೂ ಹೆಚ್ಚು ಜನರು ಮೋದಿಯವರೊಂದಿಗೆ ಯೋಗ ಮಾಡುತ್ತಾರೆ. ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕ ಮೋದಿ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಈಗಾಗಲೆ ಜಮ್ಮು ಮತ್ತು ಕಾಶ್ಮೀರವನ್ನು ತಲುಪಿದ್ದಾರೆ. ಗುರುವಾರ (ಜೂ.20) ರಂದೇ ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದಾರೆ. ಯೋಗ ದಿನಾಚರಣೆ ಕಾರ್ಯಕ್ರಮ ಬಳಿಕ ಪ್ರಧಾನಿ ಮೋದಿಯವರು ಶಿಕ್ಷಣ ಸೇರಿದಂರೆ ವಿವಿಧ 1500 ಕೋಟಿಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಭಾರತದಲ್ಲಿ 2 ಸಾವಿರಕ್ಕೂ ಅಧಿಕ ವರ್ಷಗಳಿಂದ ಯೋಗ ರೂಢಿಯಲ್ಲಿದೆ. 2015ಕ್ಕೂ ಮುನ್ನ ಜಾಗತಿಕ ಮನ್ನಣೆ. ಪ್ರಚಾರವನ್ನಾಗಿ ಪಡೆದಿರಲಿಲ್ಲ. ಆದರೆ 10 ವರ್ಷಗಳಿಂದೀಚೆಗೆ ಪುರಾತನ ಯೋಗ ಗ್ಲೋಬಲ್ ಯೋಗವಾಗಿ ಬೆಳೆದಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. 2014ರ ಸೆ. 27ರಂದು ಪ್ರಧಾನಿ ವಿಶ್ವಸಂಸ್ಥೆಯ 69ನೇ ಸಾಮಾನ್ಯ ಸಭೆಯಲ್ಲಿ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಬೇಕೆಂದು ಕರೆ ಕೊಟ್ಟಿದ್ದರು. ಅದೇ ವರ್ಷ ಡಿ.11 ರಂದು ವಿಶ್ವಸಂಸ್ಥೆಯಲ್ಲಿ ಗೊತ್ತುವಳಿ ಮಂಡಿಸಿದ್ದರು. ಗೊತ್ತುವಳಿಗೆ 177 ದೇಶಗಳ ಸಮ್ಮತಿ ನಂತರ ಯೋಗ ದಿನ ಆಚರಣೆಗೆ ನಿರ್ಧರಿಸಲಾಯಿತು. ಜೂ. 21, 2015ರಂದು ಮೊದಲ ಯೋಗ ದಿನ ಆಚರಿಸಲಾಯಿತು.