ಸಂಸತ್ ಭವನ ನಿರ್ಮಾಣಕ್ಕೆ ಹಗಲಿರುಳು ದುಡಿದ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಿದ ಮೋದಿ
ಹೊಸ ಸಂಸತ್ ಭವನ ನಿರ್ಮಾಣಕ್ಕೆ ಹಗಲಿರುಳು ದುಡಿದ ಕಾರ್ಮಿಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸನ್ಮಾನಿಸಿ ಗೌರವಿಸಿದರು.
ನವದೆಹಲಿ: ನೂತನ ಸಂಸತ್ ಭವನ (new Parliament building) ಉದ್ಘಾಟಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಮೇ 28) ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಬಳಿಕ ಚಿನ್ನದ ರಾಜದಂಡವನ್ನು ಹಿಡಿದು ನೂತನ ಸಂಸತ್ ಪ್ರವೇಶಿಸಿ ಸ್ಪೀಕರ್ ಛೇಂಬರ್ ಮುಂದೆ ಪ್ರತಿಷ್ಠಾಪಿಸಿದರು. ನಂತರ ಹೊಸ ಸಂಸತ್ ಭವನ ನಿರ್ಮಾಣಕ್ಕೆ ಹಗಲಿರುಳು ದುಡಿದ ಕಾರ್ಮಿಕರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸನ್ಮಾನಿಸಿ ಗೌರವಿಸಿದರು.