ಹತ್ತಿರ ಕರೆದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ

Updated on: May 02, 2025 | 5:34 PM

ಪ್ರಧಾನಿ ಮೋದಿ ಅವರು 58,000 ಕೋಟಿ ರೂ. ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೂ ಮೊದಲು ಪವನ್ ಕಲ್ಯಾಣ್ ಸ್ವಾಗತ ಭಾಷಣ ಮಾಡಿದರು. ಅದಾದ ನಂತರ ಅವರನ್ನು ಹತ್ತಿರ ಕರೆದ ಪ್ರಧಾನಿ ನರೇಂದ್ರ ಮೋದಿ ಪವನ್ ಕಲ್ಯಾಣ್​ಗೆ ಚಾಕೋಲೇಟ್ ನೀಡಿದರು. ಅದನ್ನು ಕಂಡ ಸಿಎಂ ಚಂದ್ರಬಾಬು ನಾಯ್ಡು ನಗುತ್ತಾ ಪವನ್ ಕಲ್ಯಾಣ್ ಬೆನ್ನು ತಟ್ಟಿದರು.

ಅಮರಾವತಿ, ಮೇ 2: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದು, ಆಂಧ್ರದ ರಾಜಧಾನಿ ಅಮರಾವತಿ ಯೋಜನೆಗೆ ಚಾಲನೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಆಂಧ್ರಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆಂಧ್ರಪ್ರದೇಶದ ರಾಜಧಾನಿಯ ಅಭಿವೃದ್ಧಿ ಚಟುವಟಿಕೆಗಳ ಪುನರಾರಂಭದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಅಮರಾವತಿಗೆ ಆಗಮಿಸಿದರು. ರಾಜ್ಯ ಸಚಿವಾಲಯದ ಬಳಿ ಇರುವ ಹೆಲಿಪ್ಯಾಡ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸ್ವಾಗತಿಸಿದರು.

ಇದಾದ ನಂತರ ಪ್ರಧಾನಿ ಮೋದಿ ಅವರು 58,000 ಕೋಟಿ ರೂ. ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೂ ಮೊದಲು ಪವನ್ ಕಲ್ಯಾಣ್ ಸ್ವಾಗತ ಭಾಷಣ ಮಾಡಿದರು. ಅದಾದ ನಂತರ ಅವರನ್ನು ಹತ್ತಿರ ಕರೆದ ಪ್ರಧಾನಿ ನರೇಂದ್ರ ಮೋದಿ ಪವನ್ ಕಲ್ಯಾಣ್​ಗೆ ಚಾಕೋಲೇಟ್ ನೀಡಿದರು. ಅದನ್ನು ಕಂಡ ಸಿಎಂ ಚಂದ್ರಬಾಬು ನಾಯ್ಡು ನಗುತ್ತಾ ಪವನ್ ಕಲ್ಯಾಣ್ ಬೆನ್ನು ತಟ್ಟಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More