ಭುವನೇಶ್ವರದಲ್ಲಿ ಆರ್‌ಬಿಐನ 169 ಕೋಟಿ ರೂ. ಮೌಲ್ಯದ ಡೇಟಾ ಸೆಂಟರ್ ಉದ್ಘಾಟಿಸಿದ ಪ್ರಧಾನಿ ಮೋದಿ

Updated on: Oct 25, 2026 | 9:17 PM

ಭೂಕಂಪನ ರಹಿತ ಹಾಗೂ ಅಂತಾರಾಷ್ಟ್ರೀಯ ಗಡಿಗಳಿಂದ ದೂರವಿರುವ ಭೌಗೋಳಿಕವಾಗಿ ಸುರಕ್ಷಿತ ಪ್ರದೇಶವಾದ ಜಟಣಿಯಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದ್ದು, ನೈಸರ್ಗಿಕ ವಿಕೋಪಗಳು ಮತ್ತು ಭೌಗೋಳಿಕ ಸವಾಲುಗಳಿಂದ ಡೇಟಾಗೆ ಯಾವುದೇ ಹಾನಿಯಾಗದಂತೆ ವಿನ್ಯಾಸಗೊಳಿಸಲಾಗಿದೆ. ಈ ಡೇಟಾ ಸೆಂಟರ್ ಆರ್‌ಬಿಐನ ಪ್ರಮುಖ ಪಾವತಿ ವ್ಯವಸ್ಥೆಗಳು ಸೇರಿದಂತೆ ಅತ್ಯಂತ ನಿರ್ಣಾಯಕ ಹಣಕಾಸು ಸೇವೆಗಳನ್ನು ಸುಗಮವಾಗಿ ನಿರ್ವಹಿಸಲು ಬೆಂಬಲ ನೀಡಲಿದೆ.

ಭುವನೇಶ್ವರ, ಅಕ್ಟೋಬರ್ 25: ಒಡಿಶಾದ ಭುವನೇಶ್ವರದ ಜಟಣಿ (ಇನ್ಫೋ ವ್ಯಾಲಿ-II) ಪ್ರದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ನೂತನವಾಗಿ ನಿರ್ಮಿಸಲಾದ ಅತ್ಯಾಧುನಿಕ ಡೇಟಾ ಸೆಂಟರ್ ಮತ್ತು ಸೈಬರ್ ಸೆಕ್ಯುರಿಟಿ ತರಬೇತಿ ಸಂಸ್ಥೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. 169 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ ಈ ಸೌಲಭ್ಯವು ಭಾರತದ ಡಿಜಿಟಲ್ ಹಣಕಾಸು ವ್ಯವಸ್ಥೆಯನ್ನು ಇನ್ನಷ್ಟು ಸುರಕ್ಷಿತಗೊಳಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಹೆಚ್ಚು ಸುರಕ್ಷಿತ ಹಣಕಾಸು ವ್ಯವಸ್ಥೆಯತ್ತ ಇದು ಇಟ್ಟಿರುವ ಬಹುದೊಡ್ಡ ಹೆಜ್ಜೆಯಾಗಿದೆ. ಆರ್‌ಬಿಐನ ಈ ನೂತನ ಸೌಲಭ್ಯಗಳು ದೇಶದ ಡಿಜಿಟಲ್ ಮೂಲಸೌಕರ್ಯ ಮತ್ತು ಸೈಬರ್ ಭದ್ರತಾ ಸಾಮರ್ಥ್ಯಗಳನ್ನು ಬಲಪಡಿಸಲಿವೆ” ಎಂದು ಹೇಳಿದರು.

ಭೂಕಂಪನ ರಹಿತ ಹಾಗೂ ಅಂತಾರಾಷ್ಟ್ರೀಯ ಗಡಿಗಳಿಂದ ದೂರವಿರುವ ಭೌಗೋಳಿಕವಾಗಿ ಸುರಕ್ಷಿತ ಪ್ರದೇಶವಾದ ಜಟಣಿಯಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದ್ದು, ನೈಸರ್ಗಿಕ ವಿಕೋಪಗಳು ಮತ್ತು ಭೌಗೋಳಿಕ ಸವಾಲುಗಳಿಂದ ಡೇಟಾಗೆ ಯಾವುದೇ ಹಾನಿಯಾಗದಂತೆ ವಿನ್ಯಾಸಗೊಳಿಸಲಾಗಿದೆ. ಈ ಡೇಟಾ ಸೆಂಟರ್ ಆರ್‌ಬಿಐನ ಪ್ರಮುಖ ಪಾವತಿ ವ್ಯವಸ್ಥೆಗಳು ಸೇರಿದಂತೆ ಅತ್ಯಂತ ನಿರ್ಣಾಯಕ ಹಣಕಾಸು ಸೇವೆಗಳನ್ನು ಸುಗಮವಾಗಿ ನಿರ್ವಹಿಸಲು ಬೆಂಬಲ ನೀಡಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More