ಚಹಾ ಕುಡಿಯುತ್ತಾ ಒಡಿಶಾದ ಮಹಿಳೆಯರ ಜೊತೆ ಪ್ರಧಾನಿ ಮೋದಿ ಸಂವಾದ

|

Updated on: Sep 17, 2024 | 7:09 PM

ಪ್ರಧಾನ ಮಂತ್ರಿ ಆವಾಸ್ ಯೋಜನೆ- ಅರ್ಬನ್ (ಪಿಎಂಎವೈ-ಯು) ಫಲಾನುಭವಿಗಳೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಒಡಿಶಾದ ಸಬರ್ ಸಾಹಿ ಸ್ಲಂ ಪ್ರದೇಶದಲ್ಲಿ ಸಂವಾದ ನಡೆಸಿದರು. ಮಹಿಳೆಯರು ಮತ್ತು ಮಕ್ಕಳು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಸಂವಾದ ನಡೆಸಿದರು.

ಭುವನೇಶ್ವರ: ಒಡಿಶಾದ ಭುವನೇಶ್ವರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ಪ್ರಧಾನಿ ಮೋದಿ ಬಿಗಿ ಭದ್ರತೆಯಲ್ಲಿ ಗಡಕಾನಾ ಪ್ರದೇಶದ ಸಬರ್ ಸಾಹಿ ಸ್ಲಂಗೆ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು. ಭುವನೇಶ್ವರ ವಿಮಾನ ನಿಲ್ದಾಣದಿಂದ ಗಡಕಾನಾವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ಜನರು ವಿಶೇಷವಾಗಿ ಮಹಿಳೆಯರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಯೊಬ್ಬರು ಶಬರಿಯ ಹಾಗೆ ನಿಮ್ಮನ್ನು ನೋಡಲು ಕಾಯುತ್ತಿದ್ದೆವು ಎಂದು ಹೇಳಿದ್ದಾರೆ.

ಇನ್ನೋರ್ವ ಫಲಾನುಭವಿ ಮಹಿಳೆ ತಾವು ಪ್ರಧಾನಿ ಮೋದಿಯವರಿಗೆ ಕುರ್ತಾವನ್ನು ವಿನ್ಯಾಸಗೊಳಿಸಿ, ಹೊಲೆದುಕೊಡುವುದಾಗಿ ಹೇಳಿದರು. ಮೋದಿಯವರ ಜೊತೆ ಚಹಾ ಕುಡಿಯುತ್ತಾ ಸಂವಾದದಲ್ಲಿ ಭಾಗಿಯಾದ ಮಹಿಳೆಯೊಬ್ಬರು ಮುಂದಿನ ಬಾರಿ ಒಡಿಶಾಗೆ ಬಂದಾಗ ನಮ್ಮ ಮನೆಗೆ ಊಟಕ್ಕೆ ಬರಬೇಕೆಂದು ಆಹ್ವಾನಿಸಿದರು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ