Modi Roadshow: ರೋಡ್ ಶೋ ವೇಳೆ ಶಂಕರ್ ನಾಗ್ ಪ್ರತಿಮೆಗೆ ಮೋದಿ ಪುಷ್ಪಾರ್ಚನೆ
ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ನ್ಯೂ ತಿಪ್ಪಸಂದ್ರದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ನಮಿಸಿ, ಪುಷ್ಪಾರ್ಚನೆ ಮಾಡಿದ ಪ್ರಧಾನಿ ಮೋದಿ ಎರಡನೇ ಹಂತದ ರೋಡ್ ಶೋ ಆರಂಭಿಸಿದ್ದಾರೆ. ರೋಡ್ ಶೋ ಮಾರ್ಗ ಮಧ್ಯೆ ವಾಹನದಲ್ಲಿದ್ದುಕೊಂಡೇ ಶಂಕರ್ ನಾಗ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.
ಬೆಂಗಳೂರು: ವಿಧಾನಸಭೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಮೂಲೆ ಮೂಲೆಗಳಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಅದರಂತೆ ಇಂದು ಬೆಂಗಳೂರಿನ ನ್ಯೂ ತಿಪ್ಪಸಂದ್ರದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ನಮಿಸಿ, ಪುಷ್ಪಾರ್ಚನೆ ಮಾಡಿದ ಪ್ರಧಾನಿ ಮೋದಿ ಎರಡನೇ ಹಂತದ ರೋಡ್ ಶೋ ಆರಂಭಿಸಿದ್ದಾರೆ. ನ್ಯೂ ತಿಪ್ಪೇಸಂಧ್ರ ರಸ್ತೆಯಿಂದ ಆರಂಭವಾಗಿದ್ದು, ಮಾರ್ಗದಲ್ಲಿ ಜನರು ಕಿಕ್ಕಿರಿದು ಸೇರಿದ್ದಾರೆ. ತೆರೆದ ವಾಹನದಲ್ಲಿ ನಿಂತು ಜನರತ್ತ ಕೈಬೀಸುತ್ತಿರುವ ಪ್ರಧಾನಿ ಮೋದಿಯವರ ಮೇಲೆ ಹೂವಿನ ಮಳೆಗರೆಯುತ್ತಿದ್ದಾರೆ. ಇನ್ನು ಮೋದಿ ಸಹ ರೋಡ್ ಶೋ ಮಾರ್ಗ ಮಧ್ಯೆ ವಾಹನದಲ್ಲಿದ್ದುಕೊಂಡೇ ಶಂಕರ್ ನಾಗ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು.