Modi Road Show: ಬೆಂಗಳೂರಿನಲ್ಲಿ ಮೋದಿ 2ನೇ ಹಂತದ ರೋಡ್​ ಶೋ, ನೇರ ಪ್ರಸಾರ ಇಲ್ಲಿದೆ

Modi Road Show: ಬೆಂಗಳೂರಿನಲ್ಲಿ ಮೋದಿ 2ನೇ ಹಂತದ ರೋಡ್​ ಶೋ, ನೇರ ಪ್ರಸಾರ ಇಲ್ಲಿದೆ

ಆಯೇಷಾ ಬಾನು
|

Updated on:May 07, 2023 | 10:58 AM

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರ 2ನೇ ಸುತ್ತಿನ ರೋಡ್​ ಶೋ ಶುರುವಾಗಿದೆ. ನ್ಯೂ ತಿಪ್ಪಸಂದ್ರ ರಸ್ತೆಯಿಂದ ಆರಂಭವಾಗಿ ಟ್ರಿನಿಟಿ ಸರ್ಕಲ್​ವರೆಗೆ ಮೋದಿ ರೋಡ್​ಶೋ ನಡೆಯಲಿದೆ.

ನಿನ್ನೆ ಬೆಂಗಳೂರಿನಲ್ಲಿ ಸಕ್ಸಸ್‌ ಫುಲ್ ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಇಂದು ಮತ್ತೊಂದು ಸುತ್ತಿನ ರೋಡ್ ಶೋಗೆ ನಡೆಸುತ್ತಿದ್ದಾರೆ. ಸಿವಿರಾಮನ್ ನಗರ ವಿಧಾನಸಭೆ ಕ್ಷೇತ್ರದ ಸುರಂಜನ್ ದಾಸ್ ರಸ್ತೆಯ ಬೆಮೆಲ್ ಸರ್ಕಲ್‌ನಿಂದ ಶುರುವಾಗುವ ಮೋದಿ ರೋಡ್ ಶೋ, ಟ್ರಿನಿಟಿ ಜಂಕ್ಷನ್‌ನಲ್ಲಿ ಕೊನೆಯಾಗಲಿದೆ. 6 ಕ್ಷೇತ್ರಗಳನ್ನ ಗುರಿಯಾಗಿಸಿಕೊಂಡು 6 ಕಿಲೋ ಮೀಟರ್‌ ಸವಾರಿ ಮಾಡಲಿದ್ದಾರೆ. ರೋಡ್‌ ಶೋ ಮೂಲಕವೇ ಮತಬೇಟೆಯಾಡಲಿದ್ದಾರೆ. ಮೋದಿ ರೋಡ್​ ಶೋನ ನೇರ ಪ್ರಸಾರ ಇಲ್ಲಿದೆ.

Published on: May 07, 2023 10:39 AM