ಬೆಂಗಳೂರಲ್ಲಿ ಮೋದಿ ರೋಡ್​ ಶೋ: ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಬಿಗಿ ಪೊಲೀಸ್​ ಭದ್ರತೆ

ಬೆಂಗಳೂರಲ್ಲಿ ಮೋದಿ ರೋಡ್​ ಶೋ: ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಬಿಗಿ ಪೊಲೀಸ್​ ಭದ್ರತೆ

ವಿವೇಕ ಬಿರಾದಾರ
|

Updated on: May 07, 2023 | 9:23 AM

ನಗರದಲ್ಲಿ ಇಂದು (ಮೇ.07) ಪ್ರಧಾನಿ ಮೋದಿಯವರ ರೋಡ್​ ಶೋ ನಡೆಯಲಿದ್ದು, ಈ ಸಂಬಂಧ ಸಿಲಿಕಾನ್​ ಸಿಟಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಬೆಂಗಳೂರು: ನಗರದಲ್ಲಿ ಇಂದು (ಮೇ.07) ಪ್ರಧಾನಿ ಮೋದಿಯವರ ರೋಡ್​ ಶೋ ನಡೆಯಲಿದ್ದು, ಈ ಸಂಬಂಧ ಸಿಲಿಕಾನ್​ ಸಿಟಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೇಖ್ರೀ ಸರ್ಕಲ್ ಪೊಲೀಸರು ಹೆಚ್ಚಿನ ಬ್ಯಾರಿಕೇಟ್ ಅಳವಡಿಸಿದ್ದು, ಸರ್ಕಲ್ ಬಳಿಯ ಎಲ್ಲ ರಸ್ತೆ ಬಂದ್​ ಮಾಡಿದ್ದಾರೆ. ಅಲ್ಲದೇ ಇನ್ನು ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಪ್ರಧಾನಿ ಭದ್ರತೆಗೆ 2 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಇಬ್ಬರು ಡಿಸಿಪಿ, 20 ಎಸಿಪಿ, 60 ಇನ್ಸ್​ಪೆಕ್ಟರ್​ಗಳು ಸೇರಿದಂತೆ 2 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.