ವಿಕಲಚೇತನ ಬಿಜೆಪಿ ಕಾರ್ಯಕರ್ತನ ಉತ್ಸಾಹಕ್ಕೆ ಶಹಬಾಷ್ ಗಿರಿ ನೀಡಿದ ಪ್ರಧಾನಿ ಮೋದಿ
ಹೊರವಲಯದ ಅಜ್ಜಯ್ಯನ ದೇಗುಲ ಬಳಿಯ ಹೆಲಿಪ್ಯಾಡ್ಗೆ ವ್ಹೀಲ್ಚೇರ್ನಲ್ಲಿ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತ ಹನುಮಂತಪ್ಪ ದಾಸರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ.
ಹಾವೇರಿ: ಹೊರವಲಯದ ಅಜ್ಜಯ್ಯನ ದೇಗುಲ ಬಳಿಯ ಹೆಲಿಪ್ಯಾಡ್ಗೆ ವ್ಹೀಲ್ಚೇರ್ನಲ್ಲಿ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತ ಹನುಮಂತಪ್ಪ ದಾಸರನ್ನು (Hanumanthappa Dasara) ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ. ಬಿಜೆಪಿ ಚುನಾವಣಾ ಸಮಾವೇಶ ಮುಗಿಸಿ ತೆರಳುತ್ತಿದ್ದ ವೇಳೆ ಭೇಟಿ ಮಾಡಿದ್ದು, ದಿವ್ಯಾಂಗ ಹನುಮಂತಪ್ಪ ದಾಸರ ಯೋಗಕ್ಷೇಮವನ್ನು ಮೋದಿ ವಿಚಾರಿಸಿದ್ದಾರೆ. ಹನುಮಂತಪ್ಪ ದಾಸರ ಹಾವೇರಿ ತಾಲೂಕಿನ ಅಗಡಿ ಗ್ರಾಮದ ನಿವಾಸಿ. ಬೂತ್ ಪ್ರಮುಖನಾಗಿರುವ ಹನುಮಂತಪ್ಪ ಹುಟ್ಟು ದಿವ್ಯಾಂಗರಾಗಿದ್ದಾರೆ. ಬಳಿಕ ಮಾತನಾಡಿರುವ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಆಗೋದು ನನ್ನ ಜೀವಮಾನದ ಕನಸಾಗಿತ್ತು. ಮೋದಿಯವರ ಭೇಟಿಗೆ ಸಾಕಷ್ಟು ವರ್ಷಗಳಿಂದ ಹಂಬಲಿಸುತ್ತಿದೆ. ಅವರನ್ನ ಭೇಟಿ ಮಾಡಿರೋದು ದೇವರ ದರ್ಶನ ಮಾಡಿದಷ್ಟೇ ಖುಷಿಯಾಗಿದೆ. ಮೋದಿಯವರು ನಾನು ಅಂಗವಿಕಲನಾಗಿದ್ರು ಬೂತಮಟ್ಟದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವುದಕ್ಕೆ ಶಹಬಾಷ್ ಗಿರಿ ನೀಡಿದರು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ

ಹನಿಮೂನ್ ಟ್ರಿಪ್ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್ ಕೊನೆ ರೀಲ್ಸ್

ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ

ಪಹಲ್ಗಾಮ್ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
