Karnataka Assembly Polls; ಶಿವಲಿಂಗೇಗೌಡರು ಇತಿಹಾಸ ಮರೆತು ಕಾಂಗ್ರೆಸ್ ಬಸ್ಸಲ್ಲಿ ಕೂತು ವಿಧಾನಸೌಧಕ್ಕೆ ಬರೋದನ್ನು ಮಾತ್ರ ಯೋಚಿಸಬೇಕು: ಡಿಕೆ ಶಿವಕುಮಾರ್
ಈಗಲೂ ಶಿವಲಿಂಗೇಗೌಡರು ದೇವೇಗೌಡ, ರೇವಣ್ಣನವರ ಹೆಸರು ಜಪಿಸುತ್ತಿರುತ್ತಾರೆ. ಅವರು ಅವರು ಇತಿಹಾಸವನ್ನು ಮರೆತು ವಾಸ್ತವ ಸ್ಥಿತಿಗೆ ಬರಬೇಕಿದೆ ಎಂದು ಶಿವಕುಮಾರ್ ಹೇಳಿದರು.
ಹಾಸನ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಇಂದು ಜಿಲ್ಲೆಯ ಅರಕಲಗೂಡಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಎಂ ಶಿವಲಿಂಗೇಗೌಡರ (KM Shivalinge Gowda) ಪರ ಅಬ್ಬರ ಪ್ರಚಾರ ಮಾಡುವಾಗ ಅವರನ್ನು ಒಂದಿಷ್ಟು ಛೇಡಿಸಿದರು. ಶಿವಲಿಂಗಗೌಡರಿಗೆ ಸ್ವಲ್ಪ ಬುದ್ಧಿ ಕಮ್ಮಿ, ಈಗಲೂ ಅವರು ದೇವೇಗೌಡ (HD Devegowda), ರೇವಣ್ಣನವರ (HD Revanna) ಹೆಸರು ಜಪಿಸುತ್ತಿರುತ್ತಾರೆ. ಅವರು ಅವರು ಇತಿಹಾಸವನ್ನು ಮರೆತು ವಾಸ್ತವ ಸ್ಥಿತಿಗೆ ಬರಬೇಕಿದೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ತಮ್ಮ ಬಸ್ಸು ಅವರ ಮನೆ ಬಾಗಿಲಿಗೆ ಬಂದು ನಿಂತಿದೆ. ಅವರ ಮನೆ ಮುಂದೆ ಲಕ್ಷ್ಮಿ ಬಂದು ನಿಂತಿದ್ದಾಳೆ. ಶಿವಲಿಂಗೇಗೌಡರು ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುವ ಎಲ್ಲ ಅಭ್ಯರ್ಥಿಗಳನ್ನು ಬಸ್ಸಲ್ಲಿ ಕೂರಿಸಿಕೊಂಡು ವಿಧಾನಸೌಧದ ಕಡೆ ಬರೋದನ್ನು ಮಾತ್ರ ಯೋಚಿಸಬೇಕು ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ