Karnataka Assembly Polls: ಅಥಣಿ ಬಿಜೆಪಿ ಸಮಾವೇಶದಲ್ಲಿ ಹೆಸರು ಉಲ್ಲೇಖಿಸದೆ ಲಕ್ಷ್ಮಣ ಸವದಿ ಮೇಲೆ ಟೀಕಾಪ್ರಹಾರ ನಡೆಸಿದ ರಮೇಶ್ ಜಾರಕಿಹೊಳಿ
ಚುನಾವಣೆಯಲ್ಲಿ ಸೋತರೂ ಬಿಜೆಪಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಸಾರಿಗೆ ಖಾತೆಯನ್ನೂ ನೀಡಿತು. ಆದರೆ ಈ ಮನುಷ್ಯ ತನಗೆ ಅನ್ಯಾಯ ಅಂತ ಹೇಳಿ ಕಾಂಗ್ರೆಸ್ ಸೇರಿದ ಅಂತ ರಮೇಶ್ ಹೇಳಿದರು.
ಬೆಳಗಾವಿ: ಅಥಣಿ ಕ್ಷೇತ್ರದ ಫಲಿತಾಂಶ ಏನೇ ಅಗಲಿ, ಅದರ ನಂತರವೂ ರಮೇಶ್ ಜಾರಕಿಹೊಳಿ (Ramesh Jarkiholi) ಮತ್ತು ಲಕ್ಷ್ಮಣ ಸವದಿ (Laxman Savadi) ನಡುವಿನ ವೈರತ್ವ ಕೊನೆಗೊಳ್ಳಲಾರದು. ಇವರಿಬ್ಬರು ಪರಸ್ಪರರನ್ನು ರಾಜಕೀಯವಾಗಿ ಮುಗಿಸಬೇಕೆನ್ನುವ ಪಣತೊಟ್ಟಂತಿದೆ. ಇಂದು ಅಥಣಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲೊ ಮಹೇಶ್ ಕುಮಟಳ್ಳಿ (Mahesh Kumtalli) ಪರ ಪ್ರಚಾರ ಮಾಡಿದ ರಮೇಶ್ ಜಾರಕಿಹೊಳಿ, ಸವದಿಯ ಹೆಸರು ಉಲ್ಲೇಖಿಸದೆ ಟೀಕಾಪ್ರಹಾರ ನಡೆಸಿದರು. ಚುನಾವಣೆಯಲ್ಲಿ ಸೋತರೂ ಬಿಜೆಪಿ ಅವರನ್ನು ಉಪಮುಖ್ಯಮಂತ್ರಿ ಸ್ಥಾನ ನೀಡಿ ಸಾರಿಗೆ ಖಾತೆಯನ್ನೂ ನೀಡಿತು. ಆದರೆ ಈ ಮನುಷ್ಯ ತನಗೆ ಅನ್ಯಾಯ ಅಂತ ಹೇಳಿ ಕಾಂಗ್ರೆಸ್ ಸೇರಿದ ಅಂತ ಹೇಳಿದ ರಮೇಶ್, ಅಸಲಿಗೆ ಅನ್ಯಾಯವಾಗಿದ್ದು ತನಗೆ, ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್ ಗೆ ಎಂದರು. ಇಂಥ ವ್ಯಕ್ತಿಗೆ ಪಾಠ ಕಲಿಸುವ ಅವಕಾಶ ಜನರಿಗೆ ಸಿಕ್ಕಿದೆ, ಮಹೇಶ್ ಕುಮಟಳ್ಳಿಗೆ ವೋಟು ನೀಡಿ ಗೆಲ್ಲಿಸಬೇಕೆಂದು ಅವರು ಕೋರಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ