Karnataka Assembly Polls: ಬಬಲೇಶ್ವರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂಬಿ ಪಾಟೀಲ ಪರ ಭರ್ಜರಿ ಪ್ರಚಾರ ನಡೆಸಿದ ನಟಿ ರಮ್ಯಾ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಮೊದಲಾದ ಯೋಜನೆಗಳ ಜೊತೆ ಪ್ರಣಾಳಿಕೆ ನೀಡಿದ ಭರವಸೆಗಳು ಜಾರಿಗೆ ಬರುತ್ತವೆ ಎಂದು ರಮ್ಯಾ ಹೇಳಿದರು.
ವಿಜಯಪುರ: ಚಿತ್ರನಟಿ ರಮ್ಯಾ (Ramya) ಇಂದು ವಿಜಯಪುರ ಬಬಲೇಶ್ವರ ಕ್ಷೇತ್ರದಲ್ಲಿ ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಎಂಬಿ ಪಾಟೀಲ (MB Patil) ಪರ ಪ್ರಚಾರ ನಡೆಸಿದರು. ಮೊದಲಿನ ಹಾಗೆ ಹೆಚ್ಚೆಚ್ಚು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳದಿದ್ದರೂ ರಮ್ಯಾ ಜನಪ್ರಿಯತೆ (popularity) ಹಾಗೂ ಮೋಹಕತೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಬಬಲೇಶ್ವರದಲ್ಲಿ ಅವರು ವಾಹನ ಹತ್ತಿ ನಿಂತಾಗ ನೆರೆದ ಜನರಿಂದ ಕೇಕೆ, ಶಿಳ್ಳೆ. ಅದಕ್ಕೂ ಮೊದಲು ಬಬಲೇಶ್ವರದ ಕಾಂಗ್ರೆಸ್ ಕಾರ್ಯಕರ್ತರು ರಮ್ಯಾ ಮೇಲೆ ಹೂಮಳೆಗರೆದು ಸ್ವಾಗತಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಮೊದಲಾದ ಯೋಜನೆಗಳ ಜೊತೆ ಪ್ರಣಾಳಿಕೆ ನೀಡಿದ ಭರವಸೆಗಳು ಜಾರಿಗೆ ಬರುತ್ತವೆ ಎಂದು ರಮ್ಯಾ ಹೇಳಿದರು.
.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ನಿದ್ರಾದೇವಿ ನೆಕ್ಸ್ಟ್ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ

ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು

ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್

ಪಿಎಸ್ಐ ನಾಗರಾಜ್ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
