Karnataka Assembly Polls 2023: ಕನಕಪುರದಲ್ಲಿ ಪತಿ ಆರ್ ಅಶೋಕ ಪರ ಮತಯಾಚಿಸಿದ ಪ್ರಮೀಳಾ ಆಶೋಕ

Karnataka Assembly Polls 2023: ಕನಕಪುರದಲ್ಲಿ ಪತಿ ಆರ್ ಅಶೋಕ ಪರ ಮತಯಾಚಿಸಿದ ಪ್ರಮೀಳಾ ಆಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: May 06, 2023 | 2:32 PM

ಪ್ರತಿ ಚುನಾವಣೆಯಲ್ಲಿ ಕೇವಲ ಪದ್ಮನಾಭನಗರ ಕ್ಷೇತ್ರದ ಮೇಲೆ ಮಾತ್ರ ಗಮನಹರಿಸಬೇಕಾಗುತಿತ್ತು ಈ ಬಾರಿ ಎರಡೆರಡು ಕಡೆ ಓಡಾಡಬೇಕಾಗಿದೆ ಎಂದು ಪ್ರಮೀಳಾ ಹೇಳಿದರು.

ರಾಮನಗರ: ಪದ್ಮನಾಭನಗರ ಮತ್ತು ಕನಕಪುರ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಕಂದಾಯ ಸಚಿವ ಆರ್ ಅಶೋಕ (R Ashoka) ಅವರ ಪತ್ನಿ ಪ್ರಮೀಳಾ ಅಶೋಕ (Pramila Ashoka) ಇಂದು ಕನಕಪುರ ಕ್ಷೇತ್ರದಲ್ಲಿ (Kanakapura constituency) ಮನೆ ಮನೆ ತಿರುಗಿ ಮತ ಯಾಚಿಸಿದರು. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತಾಡಿದ ಪ್ರಮೀಳಾ, ತನಗೆ ಚುನಾವಣಾ ಪ್ರಚಾರ ಹೊಸದೇನೂ ಅಲ್ಲ; ಇದಕ್ಕೂ ಮೊದಲು ಆರು ಚುನಾವಣೆಗಳಲ್ಲಿ ಪದ್ಮನಾಭನಗರ ಕ್ಷೇತ್ರದಲ್ಲಿ ಪತಿಯ ಪ್ರಚಾರ ಮಾಡಿರುವುದಾಗಿ ಅವರು ಹೇಳಿದರು. ಪ್ರತಿ ಚುನಾವಣೆಯಲ್ಲಿ ಕೇವಲ ಪದ್ಮನಾಭನಗರ ಕ್ಷೇತ್ರದ ಮೇಲೆ ಮಾತ್ರ ಗಮನಹರಿಸಬೇಕಾಗುತಿತ್ತು ಈ ಬಾರಿ ಎರಡೆರಡು ಕಡೆ ಓಡಾಡಬೇಕಾಗಿದೆ ಎಂದು ಅವರು ಹೇಳಿದರು. ಕನಕಪುರದಲ್ಲಿ ಗೆದ್ದರೆ ಅಶೋಕ ಅವರಿಗೂ ಮುಖ್ಯಮಂತ್ರಿಯಾಗುವ ಅವಕಾಶವಿದೆ ಎಂದು ಹಬ್ಬಿರುವ ವದಂತಿಯ ಬಗ್ಗೆ ಅವರ ಗಮನ ಸೆಳೆದಾಗ, ಅದು ತನಗೆ ಗೊತ್ತಿರದ ವಿಷಯ, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯಗಳ ಬಗ್ಗೆ ಕಾಮೆಂಟ್ ಮಾಡುವುದಿಲ್ಲ ಎಂದರು.
.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ