ಡಿಕೆ ಬ್ರದರ್ಸ್​​ ಪ್ರತಿತಂತ್ರ: ಆರ್ ಅಶೋಕ್​ರನ್ನ ಕಟ್ಟಿಹಾಕಲು ಪ್ರದ್ಮನಾಭನಗರದಿಂದ ಡಿಕೆ ಸುರೇಶ್​​ ಸರ್ಧೆ ?

ಪದ್ಮನಾಭನಗರದಲ್ಲಿ ಡಿ.ಕೆ.ಸುರೇಶ್ ಸಹ ನಾಮಪತ್ರ ಸಲ್ಲಿಸುತ್ತಾರೆ. ಬಿಜೆಪಿ, ಜೆಡಿಎಸ್​​ನವರು ಚೆಸ್ ಆಟ ಆಡುತ್ತಿದ್ದಾರೆ, ನಾವೂ ಆಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

Follow us
ವಿವೇಕ ಬಿರಾದಾರ
|

Updated on:Apr 19, 2023 | 12:06 PM

ಬೆಂಗಳೂರು: ರಾಜಕಾರಣದಲ್ಲಿ ತಂತ್ರ-ಪ್ರತಿತಂತ್ರ ಸಹಜ. ಪ್ರಭಾವಿ ನಾಯಕರನ್ನು ಹಣಿಯಲು ಪ್ರತಿಪಕ್ಷಗಳು ಟೊಂಕ ಕಟ್ಟಿಕೊಂಡು ನಿಂತಿರುತ್ತವೆ. ಅದರಂತೆ ಈಗ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಸ್ವಕ್ಷೇತ್ರದಲ್ಲೇ ಹಣಿಯಲು ಬಿಜೆಪಿ (BJP) ತಂತ್ರ ರೂಪಿಸಿದೆ. ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದ್ದು, ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಸಚಿವ ವಿ.ಸೋಮಣ್ಣ ಅವರನ್ನು ಕನಕಪುರದಲ್ಲಿ ಡಿಕೆ ಶಿವಕುಮಾರ್​ ವಿರುದ್ಧ ಸಾಮ್ರಾಟ್​​ ಆರ್​. ಅಶೋಕ್​ ಅವರನ್ನು ಕಣಕ್ಕೆ ಇಳಿಸಿದೆ. ಈ ಮೂಲಕ ಪ್ರಭಾವಿ ಇಬ್ಬರು ನಾಯಕರನ್ನು ತವರು ಕ್ಷೇತ್ರದಲ್ಲೇ ಕಟ್ಟಿಹಾಕಲು ಬಿಜೆಪಿ ಸೂತ್ರ ಹೆಣದಿದೆ. ಇದಕ್ಕೆ ಪ್ರತಿತಂತ್ರ ಹೆಣದಿರುವ ಡಿಕೆ ಶಿವಕುಮಾರ್​​​ ಪದ್ಮನಾಭನಗರದಲ್ಲಿ (Padmanabhanagar) ಸಾಮ್ರಾಟ್​​ ಅಶೋಕ್​ ವಿರುದ್ಧ ಸಂಸದ ಡಿಕೆ ಸುರೇಶ್​ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಇದರಿಂದ ಆರ್​. ಅಶೋಕ್​ ಅವರು ವಿಚಲಿತರಾಗಿ ಕ್ಷೇತ್ರ ಬಿಟ್ಟು ಬರದಂತೆ ಡಿಕೆ ಬ್ರದರ್ಸ್​ ಮಾಸ್ಟರ್​ ಸ್ಟ್ರೋಕ್​ ನೀಡಿದ್ದಾರೆ. ಈ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿ ಪದ್ಮನಾಭನಗರದಲ್ಲಿ ಡಿ.ಕೆ.ಸುರೇಶ್ (DK Suresh) ಸಹ ನಾಮಪತ್ರ ಸಲ್ಲಿಸುತ್ತಾರೆ. ಬಿಜೆಪಿ, ಜೆಡಿಎಸ್​​ನವರು ಚೆಸ್ ಆಟ ಆಡುತ್ತಿದ್ದಾರೆ, ನಾವೂ ಆಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್  ಪದ್ಮನಾಭಗರದ ಟಿಕೆಟ್​ ರಘುನಾಥ ನಾಯ್ಡು ಅವರಿಗೆ ​ನೀಡಿದೆ. ಆದರೆ ಕೆಳೆದ ಕಲೆ ದಿನಗಳ ಹಿಂದೆ ರಘುನಾಥ ನಾಯ್ಡು ಅವರಿಗೆ ನೀಡಲಾಗಿದ್ದ ಬಿ ಫಾರಂ ಅನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಪಸ್ ಪಡೆದುಕೊಂಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ನಂತರ ಇದೇ ಕ್ಷೇತ್ರದಿಂದ ಸಂಸದ ಡಿಕೆ ಸುರೇಶ್​ ಕೂಡ ಸ್ಪರ್ಧೆ ಮಾಡುತ್ತಾರೆಂಬ ವಂದತಿಗಳು ಎದ್ದಿದ್ದವು. ಆದರೆ ಇದಕ್ಕೆ ಡಿಕೆ ಬ್ರದರ್ಸ್​​ ಪ್ರತಿಕ್ರಿಯಿಸಿರಲಿಲ್ಲ.

ಇದನ್ನೂ ಓದಿ: ಸಿದ್ದರಾಮಯ್ಯ ಮೊಮ್ಮಗ ರಾಜಕೀಯಕ್ಕೆ ಎಂಟ್ರಿ? ತಾತನ ಸ್ಫೂರ್ತಿ..ಅಪ್ಪನ ಕನಸು..ಧವನ್ ರಾಕೇಶ್ ಹೇಳಿದ್ದೇನು?

ಈಗ ವಂದತಿಗಳಿಗೆ ತೆರಳೆದಿದ್ದು, ಈ ವಿಚಾರವಾಗಿ ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇಂದು (ಏ.19) ಪದ್ಮನಾಭನಗರ ಕ್ಷೇತ್ರದಿಂದ ಸಂಸದ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸುತ್ತಾರೆ. ಹಾಗೇ ರಘುನಾಥ ನಾಯ್ಡು ಅವರು ಕೂಡ ನಾಮಪತ್ರ ಸಲ್ಲಿಸುತ್ತಾರೆ. ನಾನೂ ಕೂಡ ನಾಮಪತ್ರ ಸಲ್ಲಿಕೆಗೆ ಹೋಗುತ್ತೇನೆ. ನಮ್ಮ ಅಭ್ಯರ್ಥಿ ರಘುನಾಥ ನಾಯ್ಡು ಗೆಲ್ಲುವ ವಾತಾವರಣ ಇದೆ ಎಂದರು. ಆದರೆ ಹೈಕಮಾಂಡ್ ನಿರ್ಧಾರದ ಬಳಿಕ ಅಂತಿಮವಾಗಿ ಕಣದಲ್ಲಿ ಉಳಿಯುವವರು ಯಾರೂ ಎಂಬ ಪ್ರಶ್ನೆ ಮೂಡಿದೆ.

ಈವರೆಗೆ ಕನಕಪುರದಲ್ಲಿ ಡಿಕೆ ಶಿವಕುಮಾರ್​ ಸ್ಪರ್ಧೆ ಮಾಡಿದರೂ ಕ್ಷೇತ್ರದ ಎಲ್ಲಾ ಜವಾಬ್ದಾರಿಯನ್ನು ಸಹೋದರ ಡಿಕೆ ಸುರೇಶ್ ನೋಡಿಕೊಂಡು ಬರುತ್ತಿದ್ದಾರೆ. ಈ ಕಾರಣಕ್ಕಾಗಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಡಿಕೆ ಶಿವಕುಮಾರ್ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆದ್ರೆ, ಈ ಬಾರಿ ಬಿಜೆಪಿ ಪ್ರಬಲ ನಾಯಕ ಆರ್. ಅಶೋಕ್ ಅವರನ್ನು ಕನಕಪುರ ಅಖಾಡಕ್ಕಿಳಿಸಿದ್ದು, ಇದಕ್ಕೆ ತಿರುಗೇಟು ನೀಡಲು ಡಿಕೆ ಸಹೋದರರು ಪ್ರತಿತಂತ್ರ ರೂಪಿಸುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಸೂಚನೆಗಾಗಿ ಕಾಯುತ್ತಿದ್ದೇನೆ

ಪದ್ಮನಾಭನಗರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ವಿಚಾರವಾಗಿ ಮಾತನಾಡಿದ ಸಂಸದ ಡಿಕೆ ಸುರೇಶ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರ ಸೂಚನೆಗಾಗಿ ಕಾಯುತ್ತಿದ್ದೇನೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಘುನಾಥ ನಾಯ್ಡು ಅವರು ಕೂಡ ನನಗೆ ಆಹ್ವಾನ ನೀಡಿದ್ದಾರೆ. ರಾಜಕಾರಣ ಲೆಕ್ಕಾಚಾರ ಒಂದಿಷ್ಟು ಆಗಿದೆ. ನನಗೆ ಆರ್​. ಅಶೋಕ್ ಅವರ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ. ನನಗೆ ಪಕ್ಷದ ಕಾರ್ಯಕರ್ತರ ಆದೇಶ ಬಹಳ ಮುಖ್ಯ ಆಗುತ್ತದೆ ಎಂದು ಸಂಸದ ಡಿಕೆ ಸುರೇಶ್​ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:52 am, Wed, 19 April 23

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ