ಭಿಕ್ಷೆ ಬೇಡಿ ಸಂಗ್ರಹಿಸಿದ 10 ಸಾವಿರ ರೂ. ನಾಣ್ಯಗಳಲ್ಲಿಯೇ ಠೇವಣಿ ಕಟ್ಟಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ, ನಾಣ್ಯ ಎಣಿಸಿ ಸಿಬ್ಬಂದಿ ಸುಸ್ತು

ನಾಮಪತ್ರ ಸಲ್ಲಿಸಿದ ಕೋಟಿ ಕೋಟಿ ಒಡೆಯರ ನಡುವೆ ಯಾದಗಿರಿ ಪಕ್ಷೇತರ ಅಭ್ಯರ್ಥಿಯೊಬ್ಬರು ಗಮನ ಸೆಳೆದಿದ್ದಾರೆ. ಭಿಕ್ಷೆ ಬೇಡಿ 10 ಸಾವಿರ ಸಂಗ್ರಹಿಸಿ ಡೆಪಾಸಿಟ್ ಮಾಡಿ ನಾಮಪತ್ರ ಸಲ್ಲಿಸಿದ್ದಾರೆ.

Follow us
ಆಯೇಷಾ ಬಾನು
|

Updated on:Apr 19, 2023 | 1:04 PM

ಯಾದಗಿರಿ: ವಿಧಾನಸಭಾ ಚುನಾವಣೆಗೆ ದಿನಗಣನೆ(Karnataka Assembly Elections 2023) ಶುರುವಾಗಿದೆ. ನಾಳೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನ. ಜೊತೆಗೆ ವರ್ಷದ ಮೊದಲ ಅಮವಾಸ್ಯೆ. ಹೀಗಾಗಿ ಇಂದೇ ರಾಜಕೀಯ ನಾಯಕರು ನಾಮಪತ್ರ ಸಲ್ಲಿಕೆಗೆ ಮುಗಿಬಿದ್ದಿದ್ದಾರೆ. ಅದರಲ್ಲೂ ನಾಮಪತ್ರ ಸಲ್ಲಿಸಿದ ಕೋಟಿ ಕೋಟಿ ಒಡೆಯರ ನಡುವೆ ಯಾದಗಿರಿ ಪಕ್ಷೇತರ ಅಭ್ಯರ್ಥಿಯೊಬ್ಬರು ಗಮನ ಸೆಳೆದಿದ್ದಾರೆ. ಭಿಕ್ಷೆ ಬೇಡಿ 10 ಸಾವಿರ ಸಂಗ್ರಹಿಸಿ ಡೆಪಾಸಿಟ್ ಮಾಡಿ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆ ಎದುರಿಸಲು ಕೋಟಿ, ಕೋಟಿ ಕರ್ಚು ಮಾಡಬೇಕು ಎನ್ನುವವರ ಮುಂದೆ ಏನೂ ಇಲ್ಲದೆಯೂ ಚುನಾವಣೆ ಎದುರಿಸಬಹುದು, ಮತದಾರರ ಮನ ಗೆಲ್ಲಬಹುದು ಎಂಬ ಸಂದೇಶ ಸಾರಲು ಹೊರಟಿದ್ದಾರೆ.

ಒಂದು ವರ್ಷದಲ್ಲಿ 10 ಸಾವಿರ ಮನೆಗಳಲ್ಲಿ ಭಿಕ್ಷೆ ಬೇಡಿ 10 ಸಾವಿರ ಸಂಗ್ರಹ

ಯಾದಗಿರಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಯಂಕಪ್ಪ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ತಾವು ಭಿಕ್ಷೆ ಬೇಡಿ ಸಂಗ್ರಹಿಸಿದ್ದ ಹಣವನ್ನು ಡೆಪಾಸಿಟಿ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಕ್ಷೇತ್ರದಾದ್ಯಂತ ಸಂಚರಿಸಿ ಭಿಕ್ಷೆ ಬೇಡಿ ಪ್ರತಿಯೊಂದು ಮನೆಯಿಂದ ಒಂದೊಂದು ರೂ. ಸಂಗ್ರಹಿಸಿ 10 ಸಾವಿರ ರೂ ವರೆಗೆ ನಾಣ್ಯಗಳನ್ನು ಜಮೇ ಮಾಡಿ ಯಾದಗಿರಿ ತಹಶೀಲ್ದಾರ್ ಕಚೇರಿಯಲ್ಲಿ ಯಂಕಪ್ಪನವರು ನಾಮಪತ್ರ ಸಲ್ಲಿಸಿದ್ದಾರೆ. ಯಂಕಪ್ಪನವರು ಯಾದಗಿರಿ ಕ್ಷೇತ್ರದ ಮನೆ ಮನೆಗಳಲ್ಲಿ ಭಿಕ್ಷೆ ಬೇಡಿ ಊಟ ಮಾಡುತ್ತಿದ್ದರಂತೆ. ದೇವಸ್ಥಾನದಲ್ಲೇ ವಾಸವಿದ್ದರಂತೆ.

ಇದನ್ನೂ ಓದಿ: Karnataka Assembly Polls; ತಾತ ಸಿದ್ದರಾಮಯ್ಯ ಜೊತೆ ಕ್ಷೇತ್ರದಲ್ಲಿ ತಿರುಗಾಡಿ ರಾಜಕಾರಣ ತಿಳಿದುಕೊಳ್ಳುವ ಆಸಕ್ತಿ ಇದೆ: ಧವನ್ ರಾಕೇಶ್

ಇನ್ನು ಈ ಬಗ್ಗೆ ಮಾತನಾಡಿದ ಯಂಕಪ್ಪ, ನಾನು ದೇಶಕ್ಕಾಗಿ, ಸಮಾಜದ ಉದ್ಧಾರಕ್ಕಾಗಿ ಕ್ಷೇತ್ರದಾದ್ಯಂತ ಸಂಚಾರ ಮಾಡಿದ್ದೇನೆ. ನನ್ನ ಜೀವನವಿಡೀ ಮನೆಯ ಮೆಟ್ಟಿಲು ತುಳಿಯದೇ ಸಮಾಜದ ಸೇವೆ ಮಾಡುತ್ತೇನೆ. ನನ್ನ ವೈಯುಕ್ತಿಕ ಜೀವನವನ್ನು ತ್ಯಜಿಸಿ ರಾಜಕೀಯ ಪ್ರವೇಶಿಸುತ್ತಿದ್ದೇನೆ ಎಂದರು. ಮತ್ತೊಂದೆಡೆ ಯಂಕಪ್ಪ ತಂದಿದ್ದ ನಾಣ್ಯಗಳನ್ನ ಎಣಿಕೆ ಮಾಡಿ ಅಧಿಕಾರಿಗಳು ಸುಸ್ತಾದ್ರು.

ರಾಣಿಬೆನ್ನೂರಿನಲ್ಲೂ ನಾಣ್ಯ ಠೇವಣಿ ಮಾಡಿ ನಾಮಪತ್ರ ಸಲ್ಲಿಕೆ

ಯಾದಗಿರಿ ಮಾತ್ರವಲ್ಲದೆ ಹಾವೇರಿಯಲ್ಲಿಯೂ ಎಎಪಿ ಅಭ್ಯರ್ಥಿಯೊಬ್ಬರು ನಾಣ್ಯಗಳ ಮೂಲಕವೇ ಠೇವಣಿ ತುಂಬಿ ನಾಮಪತ್ರ ಸಲ್ಲಿಸಿದ್ದಾರೆ. ರಾಣೇಬೆನ್ನೂರಿನಲ್ಲಿ ಹನುಮಂತಪ್ಪ ಕಬ್ಬಾರ್‌ ಎಂಬುವವರು ಮೋಟೆಯಲ್ಲಿ ನಾಣ್ಯಗಳನ್ನು ತಂದು ಡೆಪಾಸಿಟ್ ಮಾಡಿದ್ದಾರೆ. ಮೊದಲು ನಾಣ್ಯವನ್ನು ಚುನಾವಣಾಧಿಕಾರಿಯೇ ಎಣಿಸಲು ಮುಂದಾಗಿದ್ದು ಬಳಿಕ ತಮ್ಮ ಸಿಬ್ಬಂದಿ ಸಹಾಯ ಪಡೆದಿದ್ದಾರೆ. ನಾಣ್ಯಗಳನ್ನು ಎಣಿಸಲು ಸಾಕಷ್ಟು ಸಮಯ ಬೇಕಿದ್ದರಿಂದ ನಾಣ್ಯ ಎಣಿಸುವ ಮೊದಲೇ ಅವರಿಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಯಿತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:55 pm, Wed, 19 April 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ