ಪ್ರಚಾರದ ವೇಳೆ ಡಿಕೆ ಶಿವಕುಮಾರ್ ನೆನೆದು ಕಣ್ಣೀರಾಕಿದ ಸಹೋದರ ಡಿಕೆ ಸುರೇಶ್; ಕಾರಣವೇನು ಗೊತ್ತಾ?

ಪ್ರಚಾರದ ವೇಳೆ ಡಿಕೆ ಶಿವಕುಮಾರ್ ನೆನೆದು ಕಣ್ಣೀರಾಕಿದ ಸಹೋದರ ಡಿಕೆ ಸುರೇಶ್; ಕಾರಣವೇನು ಗೊತ್ತಾ?

ಕಿರಣ್ ಹನುಮಂತ್​ ಮಾದಾರ್
|

Updated on:May 07, 2023 | 9:11 AM

ವಿಧಾನಸಭೆ ಚುನಾವಣೆಗೆ ಮೂರು ದಿನಗಳು ಬಾಕಿಯಿದ್ದು, ಅಬ್ಬರದ ಪ್ರಚಾರ ಕೈಗೊಂಡಿದೆ. ಅದರಂತೆ ಕನಕಪುರ ಕ್ಷೇತ್ರದಲ್ಲಿ ಚುನಾವಣಾ ಕಣ ಕಾವು ಪಡೆದುಕೊಂಡಿದ್ದು, ಕೆಪಿಸಿಸಿ ಅಧ್ಯಕ್ಷ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಶಿವಕುಮಾರ್ ಪರ, ಸಹೋದರ ಪರ ಡಿ.ಕೆ ಸುರೇಶ್ ಮತಬೇಟೆ ನಡೆಸಿದ್ದು, ಈ ವೇಳೆ ಅಣ್ಣನನ್ನ ನೆನೆದು ಭಾವುಕರಾದರು.

ರಾಮನಗರ: ವಿಧಾನಸಭೆ ಚುನಾವಣೆ(Karnataka Assembly Election)ಗೆ ಮೂರು ದಿನಗಳು ಬಾಕಿಯಿದ್ದು, ಅಬ್ಬರದ ಪ್ರಚಾರ ಕೈಗೊಂಡಿದೆ. ಅದರಂತೆ ಕನಕಪುರ ಕ್ಷೇತ್ರದಲ್ಲಿ ಚುನಾವಣಾ ಕಣ ಕಾವು ಪಡೆದುಕೊಂಡಿದ್ದು, ಕೆಪಿಸಿಸಿ ಅಧ್ಯಕ್ಷ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಶಿವಕುಮಾರ್(D. K. Shivakumar) ಪರ, ಸಹೋದರ ಪರ ಡಿ.ಕೆ ಸುರೇಶ್(D. K Suresh) ಮತಬೇಟೆ ನಡೆಸಿದರು. ಇದೇ ವೇಳೆ ಹುಟ್ಟೂರು ಕನಕಪುರ ತಾಲೂಕಿನ ದೊಡ್ಡಹಾಲಹಳ್ಳಿಯಲ್ಲಿ ಪ್ರಚಾರ ಭಾಷಣದ ವೇಳೆ ಸುರೇಶ್ ಕಣ್ಣೀರು ಹಾಕಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ಮತಯಾಚನೆ ಸಂದರ್ಭದಲ್ಲಿ ಭಾವುಕರಾಗಿ, ಡಿ.ಕೆ ಶಿವಕುಮಾರ್ ಗಡ್ಡಬಿಟ್ಟುರುವ ವಿಚಾರವಾಗಿ ಮಾತನಾಡಿದ ಅವರು ‘ಕಳೆದ ಎರಡು ವರ್ಷದಿಂದ ಮನೆ ಸೇರಿಲ್ಲ. ಊಟ ಮಾಡಿಲ್ಲ, ನಿದ್ರೆ ಮಾಡ್ತಿಲ್ಲ. ಯಾವಾಗ ಮಲಗ್ತಾರೆ, ಏಳ್ತಾರೆ ಗೊತ್ತಿಲ್ಲ. ಎರಡು ಗಂಟೆ ಕಾಲ ಡಿ.ಕೆ ಶಿವಕುಮಾರ್ ಮಲಗಿದ್ರೆ ಹೆಚ್ಚು. ಕೆಲವರು ಗಡ್ಡಾಯಾಕೆ ಬಿಟ್ಟಿದ್ದಾರೆ ಎಂದು ಕೇಳ್ತಾರೆ. ಗಡ್ಡಕ್ಕೆ ಉತ್ತರ ಕೊಡಬೇಕಾಗಿರೋದು ಈ ತಾಲೂಕಿನ ಜನ. ಗಡ್ಡಯಾಕೆ ಬಿಟ್ಟಿದ್ದಾರೆ ಎಂದು ಹೇಳಿ ಮೇ.13 ನೇ ತಾರೀಖು ತೀರ್ಮಾನ ಆಗುತ್ತೆ ಎಂದರು.

ಇನ್ನಷ್ಟು ಚುನಾವಣಾ ಸಂಬಧಿತ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 07, 2023 09:11 AM