ವೇದಿಕೆಯ ಮೇಲೆ ಪ್ರಧಾನಿ ಮೋದಿ ಸಿದ್ದರಾಮಯ್ಯರೊಂದಿಗೆ ಆತ್ಮೀಯವಾಗಿ ಮಾತಾಡಿದರು

|

Updated on: Jan 19, 2024 | 6:47 PM

ಪ್ರಧಾನಿ ಮೋದಿ ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯ ಮೇಲೆ ಮುಖಾಮುಖಿಯಾದಾಗ ಇಬ್ಬರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಸಹಜ ಕುತೂಹಲ ಕನ್ನಡಿಗರಿಗಿತ್ತು. ಅದನ್ನು ಈ ವಿಡಿಯೋದಲ್ಲಿ ನೋಡಬಹುದು. ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯರೊಂದಿಗೆ ಕೈಕುಲುಕಿ ಭುಜ ತಟ್ಟುತ್ತಾ ಬಹಳ ಆತ್ಮೀಯವಾಗಿ ಮಾತಾಡಿದರು.

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಡುವೆ ರಾಜಕೀಯ ಮತ್ತು ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಗೌರವಾದರಗಳಿವೆ. ಪ್ರಧಾನ ಮಂತ್ರಿ ಮೋದಿಯವರು ಇಂದು ನಗರಕ್ಕೆ ಆಗಮಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಭಟ್ಟರ ಮಾರೇನಹಳ್ಳಿಯಲ್ಲಿ ಪ್ರಧಾನಿ ಮೋದಿ ಜಾಗತಿಕ ಏರೋಸ್ಪೇಸ್ ಬೋಯಿಂಗ್ ನೂತನ ಕ್ಯಾಂಪಸ್ ಉದ್ಘಾಟಿಸಲು ಬಂದಿದ್ದರು. ಅದರ ಜೊತೆಗೆ ಅಮೆರಿಕದ ನಂತರ ವಿಶ್ವದಲ್ಲೇ ಅತಿದೊಡ್ಡದು ಎನ್ನಲಾಗಿರುವ ಹೈ-ಟೆಕ್ ಏರೋಸ್ಪೇಸ್ ಪಾರ್ಕನ್ನು (aerospace park) ಸಹ ಪ್ರಧಾನಿ ಲೋಕಾರ್ಪಣೆ ಮಾಡಿದ್ದನ್ನು ಈಗಾಗಲೇ ವರದಿ ಮಾಡಿದ್ದೇವೆ. ಪ್ರಧಾನಿ ಮೋದಿ ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯ ಮೇಲೆ ಮುಖಾಮುಖಿಯಾದಾಗ ಇಬ್ಬರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಸಹಜ ಕುತೂಹಲ ಕನ್ನಡಿಗರಿಗಿತ್ತು. ಅದನ್ನು ಈ ವಿಡಿಯೋದಲ್ಲಿ ನೋಡಬಹುದು. ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯರೊಂದಿಗೆ ಕೈಕುಲುಕಿ ಭುಜ ತಟ್ಟುತ್ತಾ ಬಹಳ ಆತ್ಮೀಯವಾಗಿ ಮಾತಾಡಿದರು. ಅವರಿಬ್ಬರು ಮಾತಾಡಿದ್ದನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ ಕುತೂಹಲದಿಂದ ಗಮನಿಸುತ್ತಿರುವುದನ್ನು ಸಹ ದೃಶ್ಯಗಳಲ್ಲಿ ಗಮನಿಸಬಹುದು. ವೇದಿಕೆಯಿಂದ ನಿರ್ಗಮಿಸುವ ಮೊದಲು ಪ್ರಧಾನಿಯವರು ಬೋಯಿಂಗ್ ಸಂಸ್ಥೆಯ ಸಿಒಒ ಸ್ಟಿಫಾನಿ ಪೋಪ್ ಅವರೊಂದಿಗೂ ಮಾತಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 19, 2024 06:34 PM