PM Narendra Modi interacts with Youth: ವಿವಿಧ ರಾಜ್ಯಗಳ ಯುವಜನತೆಗೆ ಬದುಕಿನ ಪಾಠಗಳನ್ನು ವಿವರಿಸಿದ ಮೋದಿ

|

Updated on: Jan 24, 2023 | 4:36 PM

ಮಂಗಳವಾರದಂದು ಪ್ರಧಾನಿಯವರು ದೇಶದ ಎಲ್ಲ ರಾಜ್ಯಗಳಿಂದ ಆಗಮಿಸಿದ್ದ ಯುವಕ ಯುವಕರೊಂದಿಗೆ ದೆಹಲಿಯ ಕಲ್ಯಾಣನಗರದಲ್ಲಿರುವ ತಮ್ಮ ಕಚೇರಿಯ ಆವರಣದಲ್ಲಿ ಸಾಕಷ್ಟು ಸಮಯ ಕಳೆದರು.

ನವದೆಹಲಿ:  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಅವಕಾಶ ಸಿಕ್ಕಾಗಲೆಲ್ಲ ಯುವಜನರೊಂದಿಗೆ (youth) ಬೆರೆಯುತ್ತಾರೆ ಮತ್ತು ಅವರೊಂದಿಗೆ ಸಂವಾದ, ಸಮಾಲೋಚನೆ ನಡೆಸುತ್ತಾರೆ. ಪರೀಕ್ಷೆಗಳು ಹತ್ತಿರವಾದಾಗ ಅವರ ಕಚೇರಿಯ ಮೂಲಕ ಪರೀಕ್ಷಾ ಪೆ ಚರ್ಚಾ (Pareeksha Pe Charcha) ಕಾರ್ಯಕ್ರಮ ಆಯೋಜಿಸಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುತ್ತಾರೆ, ಮಕ್ಕಳ ಗೊಂದಲಗಳನ್ನು ಪರಿಹರಿಸುತ್ತಾರೆ. ಮಂಗಳವಾರದಂದು ಪ್ರಧಾನಿಯವರು ದೇಶದ ಎಲ್ಲಾ ರಾಜ್ಯಗಳಿಂದ ಆಗಮಿಸಿದ್ದ ಯುವಕ ಯುವಕರೊಂದಿಗೆ ದೆಹಲಿಯ ಕಲ್ಯಾಣನಗರದಲ್ಲಿರುವ ತಮ್ಮ ಕಚೇರಿಯ ಆವರಣದಲ್ಲಿ ಸಾಕಷ್ಟು ಸಮಯ ಕಳೆದರು. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು ಮತ್ತು ಬದುಕಿನಲ್ಲಿ ದ್ಯೇಯ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ಅವುಗಳನ್ನು ಹೇಗೆ ಸಾಕಾರಗೊಳಿಸಿಕೊಳ್ಳಬೇಕೆಂದು ವಿವರಿಸಿದರು. ಪ್ರಧಾನಿ ಮತ್ತು ಯುವಜನತೆ ನಡುವೆ ನಡೆದ ಸಂವಾದದ ಒಂದು ತುಣುಕು ಈ ವಿಡಿಯೋದಲ್ಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ