CM Vs Former CM | ಬಿಜೆಪಿ ಮಾಡುತ್ತಿರುವ ಆರೋಪಗಳ ಜೊತೆ ನಾವು ಮಾಡಿರುವ 40% ಕಮೀಶನ್ ಆರೋಪದ ತನಿಖೆಯೂ ನಡೆಯಲಿ: ಸಿದ್ದರಾಮಯ್ಯ

Arun Belly

Arun Belly |

Updated on: Jan 24, 2023 | 2:48 PM

ನಾವು ಅಧಿಕಾರದಲ್ಲಿದ್ದಾಗ ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದಲ್ಲಿದ್ದರು, ಆಗ್ಯಾಕೆ ಅವರು ಈ ಆರೋಪಗಳನ್ನು ಮಾಡಲಿಲ್ಲ ಎಂದು ಸಿದ್ದರಾಮಯ್ಯ ಕೇಳಿದರು.

ಬೆಂಗಳೂರು: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದ ಭ್ರಷ್ಟಾಚಾರಗಳ ಪ್ರಕರಣಗನ್ನು ಲೋಕಾಯುಕ್ತರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಹೇಳಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ. ಕೇವಲ ನಮ್ಮ ಮೇಲೆ ಅವರು ಈಗ ಮಾಡುತ್ತಿರುವ ಪ್ರಕರಣಗಳನ್ನು ಮಾತ್ರ ಅಲ್ಲ, ಸರ್ಕಾರದ ವಿರುದ್ಧ ನಾವು ಮಾಡಿರುವ 40% ಕಮೀಶನ್ (commission) ಆರೋಪಗಳನ್ನೂ ಲೋಕಾಯುಕ್ತರಿಗೆ ಒಪ್ಪಿಸಲಿ. ಅಥವಾ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಒಂದು ಆಯೋಗವನ್ನು ರಚಿಸಿ ತನಿಖೆ ಮಾಡಿಸಲಿ ಎಂದು ಸಿದ್ದರಾಮಯ್ಯ ಹೇಳಿದರು. ನಾವು ಅಧಿಕಾರದಲ್ಲಿದ್ದಾಗ ಬಸವರಾಜ ಬೊಮ್ಮಾಯಿ ವಿರೋಧ ಪಕ್ಷದಲ್ಲಿದ್ದರು, ಆಗ್ಯಾಕೆ ಅವರು ಈ ಆರೋಪಗಳನ್ನು ಮಾಡಲಿಲ್ಲ ಎಂದು ಸಿದ್ದರಾಮಯ್ಯ ಕೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada