PM Modi Bengaluru Visit: ಪ್ರಧಾನಿ ನರೇಂದ್ರ ಮೋದಿಗಾಗಿ ರಸ್ತೆ ಬದಿ ಕಾದು ನಿಂತ ಹೆಣ್ಮಕ್ಕಳು

Updated By: ಅಕ್ಷತಾ ವರ್ಕಾಡಿ

Updated on: Nov 11, 2022 | 11:15 AM

ಬೆಂಗಳೂರಿನ ಹಲವು ಕಾರ್ಯಕ್ರಮಗಳ ಉದ್ಘಾಟನೆಗಾಗಿ ಮೋದಿ ಬೆಂಗಳೂರಿಗೆ  ಆಗಮನ. ಮಧ್ಯಾಹ್ನ 12.10ಕ್ಕೆ ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮ ನೆರವೇರಲಿದೆ.

ರಾಜಧಾನಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ದೇವನಹಳ್ಳಿ ಬಳಿ ನಿರ್ಮಾಣವಾಗಿರೋ ಕೆಂಪೇಗೌಡ ಪುತ್ತಳಿ ಅನಾವರಣಕ್ಕಾಗಿ ಮೋದಿ ಕರುನಾಡಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಹಲವು ಕಾರ್ಯಕ್ರಮಗಳ ಉದ್ಘಾಟನೆಗಾಗಿ ಮೋದಿ ಬೆಂಗಳೂರಿಗೆ  ಆಗಮನ. ಮಧ್ಯಾಹ್ನ 12.10ಕ್ಕೆ ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮ ನೆರವೇರಲಿದೆ. 64 ಕೋಟಿ ವೆಚ್ಚದಲ್ಲಿ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಟರ್ಮಿನಲ್ -2 ಉದ್ಘಾಟನೆ ಮಾಡಲಿರುವ ನರೇಂದ್ರ ಮೋದಿ. ಈ ಹಿನ್ನೆಲೆ ಸಮಾವೇಶಕ್ಕೆ ಬರುವ 2 ಲಕ್ಷಕ್ಕೂ ಅಧಿಕ‌ ಜನರಿಗೆ ಅಡುಗೆ ತಯಾರಿ ಮಾಡಲಾಗುತ್ತಿದೆ

Published on: Nov 11, 2022 11:15 AM