My India My Life Goals; ಪರಿಸರ ಉಳಿಸಿ, ಭೂಮಿ ಸುಂದರವಾಗಿಸಲು ಪ್ರಧಾನಿ ನರೇಂದ್ರ ಮೋದಿ ಮಿಷನ್ ಲೈಫ್ ಘೋಷಣೆ ಮಾಡಿದ್ದಾರೆ: ಭೂಪೇಂದ್ರ ಯಾದವ್, ಕೇಂದ್ರ ಸಚಿವ

| Updated By: ಡಾ. ಭಾಸ್ಕರ ಹೆಗಡೆ

Updated on: Aug 07, 2023 | 12:56 PM

ನವೀಕರಿಸಬಹುದಾದ ಸಂಪನ್ಮೂಲಗಳ ಕಡೆ ಸರ್ಕಾರ ಹೆಚ್ಚು ಗಮನ ನೀಡುತ್ತಿದೆ ಮತ್ತು ಸರ್ಕಾರ ರೂಪಿಸಿರುವ ತ್ಯಾಜ್ಯ ನಿರ್ವಹಣೆ ನೀತಿ ಸ್ವಚ್ಛ ಪರಿಸರಕ್ಕಾಗಿ ನೀಡಿರುವ ಕೊಡುಗೆಯಾಗಿದೆ ಎಂದು ಸಚಿವರು ಹೇಳುತ್ತಾರೆ.

ನಮ್ಮ ಪರಿಸರವನ್ನು ಉಳಿಸಲು ಜಾಗೃತಿ ಮೂಡಿಸುವ ಹಾಗೂ ನಮಗೆ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು (natural resources) ಹಿತಮಿತವಾಗಿ ಮತ್ತು ಅತ್ಯಂತ ಸಮರ್ಪಕವಾಗಿ ಬಳಸುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮಿಷನ್ ಲೈಫ್ ಅಭಿಯಾನದ ಘೋಷಣೆ ಮಾಡಿದ್ದಾರೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ (Bhupendra Yadav) ಹೇಳುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಾವು ವೈಯಕ್ತಿಕ ಸ್ತರದಲ್ಲಿ ಬದಲಾವಣೆಗಳನ್ನು ತಂದುಕೊಳ್ಳಬೇಕು-ವಿದ್ಯುತ್, ನೀರು. ಆಹಾರಗಳ ಬಳಕೆ ಮತ್ತು ತ್ಯಾಜ್ಯ ವಿಲೇವಾರಿ ನಮ್ಮ ವೈಯಕ್ತಿಕ ವಿಚಾರವಾಗಿವೆ ಎಂದು ಸಚಿವರು ಹೇಳುತ್ತಾರೆ. ಮಿಷನ್ ಲೈಫ್ ಅಭಿಯಾನ ಜನರಲ್ಲಿ ಜಾಗೃತಿ ಮೂಡಬೇಕು, ಅವರಲ್ಲಿ ಪರಿಸರ ಉಳಿಸುವ ಬಗ್ಗೆ ವ್ಯಾಮೋಹ ಹಾಗೂ ಪ್ರೇರಣೆ ಹುಟ್ಟುವುದಕ್ಕಾಗಿ ಪ್ರಧಾನಿ ಮೋದಿಯವರ ಮಿಷನ್ ಲೈಫ್ ಅಭಿಯಾನದ ಹಿಂದಿನ ಉದ್ದೇಶ ಬಳಕೆಯಾಗಿ ಸಫಲವಾಗಬೇಕು ಎಂದು ಹೇಳುವ ಸಚಿವರು ಅದಕ್ಕಾಗಿಯೇ ಮೇರಿ ಲೈಫ್ ಫೋರ್ಟಲ್ ಸ್ಥಾಪಿಸಲಾಗಿದೆ ಮತ್ತು ಈಗಾಗಲೇ 2 ಕೋಟಿಗೂ ಹೆಚ್ಚು ಜನ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲುದಾರರಾಗಿದ್ದಾರೆ ಎನ್ನುತ್ತಾರೆ. ನಾವು ಬಳಸುವ ತಂತ್ರಜ್ಞಾನ ಪರಿಸರ ಸ್ನೇಹಿಯಾಗಿರಬೇಕು ಮತ್ತು ನಮ್ಮ ಜೀವನ ಶೈಲಿ ಪರಿಸರದೊಂದಿಗೆ ತಾಳೆಯಾಗಬೇಕು ಎಂದು ಯಾದವ್ ಹೇಳುತ್ತಾರೆ. ನವೀಕರಿಸಬಹುದಾದ ಸಂಪನ್ಮೂಲಗಳ ಕಡೆ ಸರ್ಕಾರ ಹೆಚ್ಚು ಗಮನ ನೀಡುತ್ತಿದೆ ಮತ್ತು ಸರ್ಕಾರ ರೂಪಿಸಿರುವ ತ್ಯಾಜ್ಯ ನಿರ್ವಹಣೆ ನೀತಿ ಸ್ವಚ್ಛ ಪರಿಸರಕ್ಕಾಗಿ ನೀಡಿರುವ ಕೊಡುಗೆಯಾಗಿದೆ. ಹೊಸ ತಂತ್ರಜ್ಞಾನಗಳನ್ನು ಬಳಸಿ ನಾವು ಭೂಮಿಯನ್ನು ಹಚ್ಚ ಹಸುರಾಗಿ ಮಾರ್ಪಡಿಸಬಹುದು ಎಂದು ಸಚಿವ ಭೂಪೇಂದ್ರ ಯಾದವ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 17, 2023 02:40 PM