My India My Life Goals: 42-ವರ್ಷಗಳಿಂದ ಪ್ರತಿದಿನ ಸಸಿ ನೆಡುತ್ತಿರುವ ಅಸ್ಸಾಂನ ಕಾಡು ಜೀವಿ ಜಾಧವ್ ಪೇಯೆಂಗ್ 550-ಹೆಕ್ಟೇರ್ ಅರಣ್ಯ ಸೃಷ್ಟಿಸಿದ್ದಾರೆ!

My India My Life Goals: 42-ವರ್ಷಗಳಿಂದ ಪ್ರತಿದಿನ ಸಸಿ ನೆಡುತ್ತಿರುವ ಅಸ್ಸಾಂನ ಕಾಡು ಜೀವಿ ಜಾಧವ್ ಪೇಯೆಂಗ್ 550-ಹೆಕ್ಟೇರ್ ಅರಣ್ಯ ಸೃಷ್ಟಿಸಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 17, 2023 | 2:53 PM

ಎಲ್ಲ 140 ಕೋಟಿ ಭಾರತೀಯರು, ಪರಿಸರ ಉಳಿಸುವೆಡೆ ಗಮನ ಹರಿಸಿದರೆ ನಮ್ಮ ಬದುಕುಗಳು ಸುಂದರ ಮತ್ತು ಆರೋಗ್ಯಯುಕ್ತವಾಗುತ್ತವೆ ಅಂತ ಕಾಡಿನ ಮನುಷ್ಯ ಜಾದವ್ ಹೇಳುತ್ತಾರೆ.

ಬೆಂಗಳೂರು: ಇವರನ್ನು ನೀವು ಬಲ್ಲಿರಾ? ಪರಿಸರದ ಉಳಿವಿಗಾಗಿ ಕಳೆದ 42 ವರ್ಷಗಳಿಂದ ತಮ್ಮ ಜೀವ ತೇಯುತ್ತಿರುವ ಇವರ ಹೆಸರು ಜಾದವ್ ಪೇಯೆಂಗ್ (Jadav Payeng). ಭಾರತದಲ್ಲಿ ಇವರು ಫಾರೆಸ್ಟ್ ಮ್ಯಾನ್ ಆಫ್ ಇಂಡಿಯ (The Forest Man of India) (ಭಾರತದ ಕಾಡು ಜೀವಿ) ಅಂತಲೇ ಗುರುತಿಸಿಕೊಳ್ಳುತ್ತಾರೆ. ಈಗ 65-ವರ್ಷ ವಯಸ್ಸಿನವರಾಗಿರುವ ಜಾದವ್ ತಮ್ಮ 16 ನೇ ವಯಸ್ಸಿನಲ್ಲೇ ಸಸಿಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸುವ ಕೆಲಸ ಶುರುಮಾಡಿದರು. ಪ್ರತಿದಿನ ಅವರು ಒಂದು ಸಸಿಯನ್ನು ನೆಡುತ್ತಾರೆ. ಅಲ್ಲಿಂದ ಈ ನಾಲ್ಕು ದಶಕಗಳ ಅವಧಿಯಲ್ಲಿ ಅವರು 550-ಹೆಕ್ಟೇರ್ ನಷ್ಟು ವಿಶಾಲವಾದ ಅರಣ್ಯ ಪ್ರದೇಶ (forest area) ಸೃಷ್ಟಿಸಿದ್ದ್ದಾರೆ! ಇವರೊಂದಿಗೆ ಕುಟುಂಬವೂ ಕೈ ಜೋಡಿಸುತ್ತದೆ ಮತ್ತು ಅವರೆಲ್ಲ ಅರಣ್ಯದಲ್ಲೇ ವಾಸವಾಗಿದ್ದಾರೆ. ಪರಿಸರ ಉಳಿವಿಗೆ ನೀಡುತ್ತಿರುವ ಬೃಹತ್ ಕಾಣಿಕೆಯನ್ನು ಪರಿಗಣಿಸಿ ಭಾರತ ಸರ್ಕಾರ ಜಾದವ್ ಅವರಿಗೆ ಪ್ರದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲ 140 ಕೋಟಿ ಭಾರತೀಯರು, ಪರಿಸರ ಉಳಿಸುವೆಡೆ ಗಮನ ಹರಿಸಿದರೆ ನಮ್ಮ ಬದುಕುಗಳು ಸುಂದರ ಮತ್ತು ಆರೋಗ್ಯಯುಕ್ತವಾಗುತ್ತವೆ ಅಂತ ಕಾಡಿನ ಮನುಷ್ಯ ಜಾದವ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 17, 2023 01:42 PM