Karnataka Legislative Assembly, Live: ವಿಧಾನ ಸಭೆ ಅಧಿವೇಶನ, ಸೋಮವಾರದ ಕಾರ್ಯಕಲಾಪಗಳ ನೇರ ಪ್ರಸಾರ

Karnataka Legislative Assembly, Live: ವಿಧಾನ ಸಭೆ ಅಧಿವೇಶನ, ಸೋಮವಾರದ ಕಾರ್ಯಕಲಾಪಗಳ ನೇರ ಪ್ರಸಾರ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 17, 2023 | 12:06 PM

ವಿಧಾನ ಸಭೆಯಲ್ಲಿ ನಡೆಯುತ್ತಿರುವ ಇಂದಿನ ಕಾರ್ಯಕಲಾಪಗಳ ನೇರ ಪ್ರಸಾರ.

ಬೆಂಗಳೂರು: ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನವನ್ನು (Assembly Session) ಜುಲೈ 22ರವರೆಗೆ ವಿಸ್ತರಿಸಲಾಗಿದ್ದು ಸೋಮವಾರದ ಕಾರ್ಯಕಲಾಪ ಅರಂಭವಾಗಿದೆ. ಆದರೆ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಮತ್ತು ಇನ್ನೂ ಹಲವಾರು ಸಚಿವರು ಹಾಜರಿರದ ಕಾರಣ ಬಿಜೆಪಿ ನಾಯಕ ಆರ್ ಅಶೋಕ ಆಕ್ಷೇಪಣೆ ಎತ್ತಿದರು. ಅವರೆಲ್ಲೋ ಮೀಟಿಂಗ್ ನಲ್ಲಿದ್ದಾರೆ ಬರ್ತಾರೆ, ತಾಳ್ಮೆಯಿರಲಿ ಅಂತ ಸಭಾಧ್ಯಕ್ಷ ಯುಟಿ ಖಾದರ್ ಹೇಳಿದಾಗ, ನಾವು ಯಾರನ್ನು ಪ್ರಶ್ನೆ ಕೇಳೋಣ? ಕೇವಲ ಕೆಜೆ ಜಾರ್ಜ್ ಮಾತ್ರ ಸದನದಲ್ಲಿದ್ದಾರೆ, ಹಾಗಾಗಿ ಕಾರ್ಯಕಲಾಪವನ್ನು ಅಡ್ಜರ್ನ್ ಮಾಡಿ ಎಂದು ಅಶೋಕ ಹೇಳುತ್ತಾರೆ. ವಿಧಾನ ಸಭೆಯಲ್ಲಿ ನಡೆಯುತ್ತಿರುವ ಇಂದಿನ ಕಾರ್ಯಕಲಾಪಗಳ ನೇರ ಪ್ರಸಾರ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ