Coins of Shivaji period: ಚಿತ್ರದುರ್ಗ ಭೈರಾಪುರ ಗ್ರಾಮದ ಬಳಿ ಕುರಿಗಾಹಿಗಳಿಗೆ ಛತ್ರಪತಿ ಶಿವಾಜಿ ಕಾಲದ ನಾಣ್ಯ ಸಿಕ್ಕಿವೆ!
ಸಿಕ್ಕಿರುವ ನಾಣ್ಯಗಳ ಮೇಲೆ ಕತ್ತಿ-ಗುರಾಣಿಯನ್ನು ಕೆತ್ತಿದ ಚಿತ್ರ ಮತ್ತು ಇನ್ನೊಂದು 1674 ಇಸವಿಯನ್ನು ನಮೂದಿಸಲಾಗಿದ್ದು ಇನ್ನೊಂದು ಬದಿಯಲ್ಲಿ ಶಿವಾಜಿಯ ಚಿತ್ರವನ್ನು ಕೆತ್ತಲಾಗಿದೆ.
ಚಿತ್ರದುರ್ಗ: ಛತ್ರಪತಿ ಶಿವಾಜಿ ಮಹಾರಾಜ್ (Chhatrapati Shivaji Maharaj) ಕಾಲದ ನಾಣ್ಯಗಳನ್ನು (coins) ಯಾವತ್ತಾದರೂ ನೋಡಿದ್ದೀರಾ? ನೋಡಿರುವುದಿಲ್ಲ ಬಿಡಿ, ಯಾಕೆಂದರೆ ಶಿವಾಜಿ ಆಳ್ವಿಕೆ ನಡೆಸಿದ್ದು 4 ಶತಮಾನಗಳ ಹಿಂದೆ. ಆದರೆ ಜಿಲ್ಲೆಯ ಮೊಣಕಾಲ್ಮೂರು ತಾಲ್ಲೂಕಿನ ಭೈರಾಪುರದ (Byrapura) ಗ್ರಾಮದಲ್ಲಿರುವ ಸೇತುವೆಯ ಬಳಿ ಕುರಿ ಕಾಯುತ್ತಿದ್ದ ಕುರಗಾಹಿಗಳಿಗೆ (Shepherds) ಶಿವಾಜಿ ಕಾಲದಲ್ಲಿ ಚಲಾವಣೆಯಲ್ಲಿದ್ದ ಒಂದಷ್ಟು ನಾಣ್ಯಗಳು ಸಿಕ್ಕಿವೆ. ವಿಡಿಯೋದಲ್ಲಿ ಕಾಣುತ್ತಿರುವ ಸೇತುವೆಯನ್ನು ನಿರ್ಮಸುವಾಗ ಬೇರೆಲ್ಲಿಂದೋ ಮಣ್ಣನ್ನು ಇಲ್ಲಿ ತಂದು ಹಾಕಲಾಗಿತ್ತು ಎಂದು ಸ್ಥಳೀಯರೊಬ್ಬರು ಹೇಳುತ್ತಿದ್ದಾರೆ. ಸಿಕ್ಕಿರುವ ನಾಣ್ಯಗಳ ಮೇಲೆ ಕತ್ತಿ-ಗುರಾಣಿಯನ್ನು ಕೆತ್ತಿದ ಚಿತ್ರ ಮತ್ತು ಇನ್ನೊಂದು 1674 ಇಸವಿಯನ್ನು ನಮೂದಿಸಲಾಗಿದ್ದು ಇನ್ನೊಂದು ಬದಿಯಲ್ಲಿ ಶಿವಾಜಿಯ ಚಿತ್ರವನ್ನು ಕೆತ್ತಲಾಗಿದೆ. ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದು ಊರಿಗೆ ಆಗಮಿಸಿ ಪರಿಶೀಲಿಸುವಂತೆ ವಿನಂತಿಸಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ