Siddaramaiah: 123 ಸ್ಥಾನ ಬರದಿದ್ದರೆ ಪಕ್ಷ ವಿಸರ್ಜಿಸುತ್ತೇವೆ ಎಂದಿದ್ದ ಕುಮಾರಸ್ವಾಮಿ- ಪರಿಷತ್​​ನಲ್ಲಿ ಜೆಡಿಎಸ್​ಗೆ ತಿವಿದ ಟಗರು ಸಿದ್ದರಾಮಯ್ಯ

Siddaramaiah: 123 ಸ್ಥಾನ ಬರದಿದ್ದರೆ ಪಕ್ಷ ವಿಸರ್ಜಿಸುತ್ತೇವೆ ಎಂದಿದ್ದ ಕುಮಾರಸ್ವಾಮಿ- ಪರಿಷತ್​​ನಲ್ಲಿ ಜೆಡಿಎಸ್​ಗೆ ತಿವಿದ ಟಗರು ಸಿದ್ದರಾಮಯ್ಯ

Sunil MH
| Updated By: ಸಾಧು ಶ್ರೀನಾಥ್​

Updated on:Jul 14, 2023 | 8:20 PM

HD Kumaraswamy: ಜನ ನಮ್ಮ ಪಕ್ಷವನ್ನು ನಂಬುತ್ತಾರೆ ನಿಮ್ಮನ್ನು ನಂಬಲ್ಲ ಎಂದು ಜೆಡಿಎಸ್ ಪಕ್ಷದತ್ತ ಬೊಟ್ಟು ಮಾಡಿದರು. 123 ಸ್ಥಾನ ಬರದಿದ್ದರೆ ಪಕ್ಷ ವಿಸರ್ಜಿಸುತ್ತೇವೆ ಎಂದಿದ್ದರು. ಜೆಡಿಎಸ್ ಶೇಕಡಾವಾರು ಮತ 19ರಿಂದ 13ಕ್ಕೆ ಕುಸಿದಿದೆ -ಪರಿಷತ್​​ನಲ್ಲಿ ಸಿದ್ದರಾಮಯ್ಯ

ಕರ್ನಾಟಕ ವಿಧಾನಮಂಡಲ ಮುಂಗಾರು ಜಂಟಿ ಅಧಿವೇಶನ ಮುಂದುವರಿದಿದೆ. ವಿಧಾನ ಪರಿಷತ್​​ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ (HD Kumaraswamy) ಮಾತನಾಡಿದರು. 5 ಚುನಾವಣೆಗಳ ಪೈಕಿ 2 ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದ ಸಿದ್ದರಾಮಯ್ಯ ಕಾಂಗ್ರೆಸ್​​ ಚುನಾವಣೆ ವೇಳೆ 5 ಗ್ಯಾರಂಟಿ ಘೋಷಣೆ ಮಾಡಿದ್ದೆವು. ಜನ ನಮ್ಮ ಪಕ್ಷವನ್ನು ನಂಬುತ್ತಾರೆ ನಿಮ್ಮನ್ನು ನಂಬಲ್ಲ ಎಂದು ಜೆಡಿಎಸ್ ಪಕ್ಷದತ್ತ ಬೊಟ್ಟು ಮಾಡಿದರು. ಜೆಡಿಎಸ್​ ಕೂಡ ಪಂಚರತ್ನ ಘೋಷಣೆ ಮಾಡಿತ್ತು. ಹೆಚ್ ​ಡಿ ಕುಮಾರಸ್ವಾಮಿ (HD Kumaraswamy) 123 ಸ್ಥಾನ ಬರದಿದ್ದರೆ (Karnataka Assembly Elections 2023) ಪಕ್ಷ ವಿಸರ್ಜಿಸುತ್ತೇವೆ ಎಂದಿದ್ದರು. ಜೆಡಿಎಸ್ (JDS)​​ ಶೇಕಡಾವಾರು ಮತ ಶೇ.19ರಿಂದ ಶೇ.13ಕ್ಕೆ ಕುಸಿದಿದೆ. 2005ರವರೆಗೆ ನಾನು ಜೆಡಿಎಸ್​ನಲ್ಲೇ ಇದ್ದೆ. ನಾನು ಜೆಡಿಎಸ್​ ಬಿಡಲಿಲ್ಲ, ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರು. ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ನನ್ನನ್ನು ಉಚ್ಚಾಟಿಸಿದರು. ಕಾಂಗ್ರೆಸ್​​ ಪಕ್ಷದಿಂದ (Congress) 2 ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ. ಕಾಂಗ್ರೆಸ್​ಗೆ ನಾನು ಚಿರಋಣಿ ಆಗಿರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಮನದಾಳದ ಮಾತು ಹೇಳಿದರು.

Published on: Jul 14, 2023 08:15 PM