ಹಿರಿಯ ನಾಗರಿಕರ ಆಗ್ರಹದ ಮೇರೆಗೆ ಪೊಲೀಸರು ಪಾಪ್ಕಾರ್ನ್ ಮಾರುತ್ತಿದ್ದ ಯುವಕನನ್ನು ಸ್ಟೇಶನ್ಗೆ ಕರೆದ್ಯೊಯ್ದರು!
ಪೊಲೀಸರು ಯುವಕನನ್ನು ಬಂಧಿಸಿ ಕರೆದೊಯ್ಯುತ್ತಿದ್ದರೂ ಆ ಯಜಮಾನರು ಅಲ್ಲಿ ನೆರೆದಿರುವ ಜನರಿಗೆ ಅವನು ಮುಸ್ಲಿಂ ಹುಡುಗ ಅನ್ನುತ್ತಾರೆ. ಇದು ಬೇಕಿರಲಿಲ್ಲ.
ಬೆಂಗಳೂರು: ಇದು ಲಾಲ್ಬಾಗ್ (Lalbagh) ಮುಂಭಾಗದಲ್ಲಿ ಪಾಪ್ ಕಾರ್ನ್ ಮಾರುತ್ತಿದ್ದ ಯುವಕನೊಬ್ಬ ಎಣ್ಣೆ ಬಾಟಲಿಯಲ್ಲಿ ಉಗಿದ ಪ್ರಕರಣದ ಮುಂದುವರಿದ ಭಾಗ. ಶನಿವಾರ ಬೆಳಗ್ಗೆ ನಡೆದ ಪ್ರಸಂಗವಿದು. ನೇರಳೆ ಬಣ್ಣದ ಟೀ ಶರ್ಟ್ ಧರಿಸಿರುವ ಹಿರಿಯ ನಾಗರಿಕರ ದೂರಿನ ಮೇರೆಗೆ ಪೋಲೀಸರು ನಯಾಜ್ ಹೆಸರಿನ ಪಾಪ್ ಕಾರ್ನ್ ಮಾರುವ ಯುವಕನನ್ನು ಸ್ಟೇಶನ್ ಗೆ ಕರೆದೊಯ್ಯುತ್ತಿದ್ದಾರೆ. ವಿವಾದಕ್ಕೆ ಸಿಕ್ಕಿರುವ ಎಣ್ಣೆ ಬಾಟಲಿಯನ್ನು ಸಹ ನೀವು ಪೊಲೀಸ್ ಜೀಪಲ್ಲಿ ನೋಡಬಹುದು, ಎಲ್ಲ ಸರಿ, ಹಿರಿಯ ನಾಗರಿಕರ ಒಂದು ಮಾತು ನಮಗ್ಯಾರಿಗೂ ಇಷ್ಟವಾಗಲಾರದು. ಪೊಲೀಸರು ಯುವಕನನ್ನು ಬಂಧಿಸಿ ಕರೆದೊಯ್ಯುತ್ತಿದ್ದರೂ ಆ ಯಜಮಾನರು ಅಲ್ಲಿ ನೆರೆದಿರುವ ಜನರಿಗೆ ಅವನು ಮುಸ್ಲಿಂ ಹುಡುಗ ಅನ್ನುತ್ತಾರೆ. ಇದು ಬೇಕಿರಲಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.