ಕಾಂಗ್ರೆಸ್ ಪರ ಮತ ಚಲಾಯಿಸಿದ ಜೆಡಿ(ಎಸ್) ಶಾಸಕರ ಕೈಲಾಸ ಸಮಾರಾಧನೆ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ!
ಬೆಂಬಲಿಗರು ಜೂನ್ 21 ರಂದು ಶ್ರೀನಿವಾಸ ಗೌಡರ ವೈಕುಂಠ ಸಮಾರಾಧನೆ ಸ್ವಕ್ಷೇತ್ರ ಕೋಲಾರದಲ್ಲಿ ಏರ್ಪಡಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇಂಥ ಪೋಸ್ಟ್ ಕುಟುಂಬದ ಸದಸ್ಯರನ್ನು ಘಾಸಿಗೊಳಿಸುತ್ತವೆ ಅನ್ನೋದನ್ನು ನಾವು ಮರೆಯಬಾರದು.
Kolar: ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸಲ ಅತಿರೇಕದ ಪೋಸ್ಟ್ಗಳು ಹರಿದಾಡುತ್ತವೆ ಮಾರಾಯ್ರೇ. ನಿಮಗೆ ಗೊತ್ತಿದೆ. ಶುಕ್ರವಾರ ನಡೆದ ರಾಜ್ಯಸಭಾ (RS Polls) ಚುನಾವಣೆಯಲ್ಲಿ ಕೋಲಾರದ ಜೆಡಿ(ಎಸ್) ಶಾಸಕ ಕೆ ಶ್ರೀನಿವಾಸ ಗೌಡ (K Srinivas Gowda) ಅವರು ಕಾಂಗ್ರೆಸ್ ಅಭ್ಯರ್ಥಿಗೆ (Congress candidate) ಮತ ಚಲಾಯಿಸಿ ಅದನ್ನು ನಿರ್ಭೀತಿಯಿಂದ ಹೇಳಿಕೊಂಡರು. ಅವರ ಈ ನಡೆಗೆ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿಯವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿ ಹೊರಬೀಳುವಂತೆಯೂ ಹೇಳಿದರು. ಅವರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆಯೂ ಇಲ್ಲದಿಲ್ಲ. ಆದರೆ ಏತನ್ಮಧ್ಯೆ, ಕೆಲ ಜೆಡಿ(ಎಸ್) ಬೆಂಬಲಿಗರು ಜೂನ್ 21 ರಂದು ಶ್ರೀನಿವಾಸ ಗೌಡರ ವೈಕುಂಠ ಸಮಾರಾಧನೆ ಸ್ವಕ್ಷೇತ್ರ ಕೋಲಾರದಲ್ಲಿ ಏರ್ಪಡಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇಂಥ ಪೋಸ್ಟ್ ಕುಟುಂಬದ ಸದಸ್ಯರನ್ನು ಘಾಸಿಗೊಳಿಸುತ್ತವೆ ಅನ್ನೋದನ್ನು ನಾವು ಮರೆಯಬಾರದು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

