ಹರಿತವಾದ ಆಯುಧಗಳೊಂದಿಗೆ ಬಂದು ಪೊಲೀಸರನ್ನೇ ಹೆದರಿಸಿ ಓಡಿಸಿದ ಗೂಂಡಾಗಳು, ಆಮೇಲೆ ನಡೆದಿದ್ದೇ ಬೇರೆ

Updated on: Mar 19, 2026 | 1:51 PM

ಹರಿತವಾದ ಆಯುಧಗಳ ಜತೆ ಬಂದಿದ್ದ 18 ಮಂದಿ ದುಷ್ಕರ್ಮಿಗಳು ಪೊಲೀಸರನ್ನೇ ಹೆಸರಿಸಿ ಓಡಿಸಿರುವ ಆತಂಕಕಾರಿ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಮಾರ್ಚ್​ 15ರಂದು ರಾತ್ರಿ ಈ ಘಟನೆ ನಡೆದಿದೆ. ಗುಂಪೊಂದು ಕತ್ತಿ, ಮಚ್ಚಿನ ಜತೆ ಹಳ್ಳಿಯಲ್ಲಿರುವ ತೋಟದ ಮನೆಗೆ ನುಗ್ಗಿತ್ತು. ಎರಡು ಪೊಲೀಸ್ ವ್ಯಾನ್​ಗಳು ಸ್ಥಳದಲ್ಲಿ ನಿಂತು ಅಲ್ಲಿಂದ ಹೊರಟುಹೊದವು, ನಂತರ ನಡೆದಿದ್ದು ಹಿಂಸಾಚಾರ.

ಪಠಾಣ್, ಮಾರ್ಚ್​ 19: ಹರಿತವಾದ ಆಯುಧಗಳ ಜತೆ ಬಂದಿದ್ದ 18 ಮಂದಿ ದುಷ್ಕರ್ಮಿಗಳು ಪೊಲೀಸರನ್ನೇ ಹೆಸರಿಸಿ ಓಡಿಸಿರುವ ಆತಂಕಕಾರಿ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಮಾರ್ಚ್​ 15ರಂದು ರಾತ್ರಿ ಈ ಘಟನೆ ನಡೆದಿದೆ. ಗುಂಪೊಂದು ಕತ್ತಿ, ಮಚ್ಚಿನ ಜತೆ ಹಳ್ಳಿಯಲ್ಲಿರುವ ತೋಟದ ಮನೆಗೆ ನುಗ್ಗಿತ್ತು. ಎರಡು ಪೊಲೀಸ್ ವ್ಯಾನ್​ಗಳು ಸ್ಥಳದಲ್ಲಿ ನಿಂತು ಅಲ್ಲಿಂದ ಹೊರಟುಹೊದವು, ನಂತರ ನಡೆದಿದ್ದು ಹಿಂಸಾಚಾರ.

ಕೆಲವು ದಿನಗಳ ನಂತರ ಅದೇ ಗುಂಪಿನಲ್ಲಿರುವ ಜನರನ್ನು ಬೀದಿಗೆ ಎಳೆದುಕೊಂಡು ಹೋಗಿ ಲಾಠಿ ಏಟು ಕೊಟ್ಟು ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು. ಚನಸ್ಮಾ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಸುಮಾರು ಎಂಟು ವಾಹನಗಳಲ್ಲಿ 15 ರಿಂದ 20 ಜನರು ಬಂದು ಭವೇಶ್ ದೇಸಾಯಿ ಅವರ ತೋಟದ ಮನೆಯನ್ನು ಗುರಿಯಾಗಿಸಿಕೊಂಡಿದ್ದರು. ಗೇಟ್‌ಗಳನ್ನು ಬೀಳಿಸಿ, ಅಲ್ಲಿರುವ ವಸ್ತುಗಳೆಲ್ಲವನ್ನೂ ಧ್ವಂಸಗೊಳಿಸಿ, ಕೊಲೆ ಬೆದರಿಕೆ ಹಾಕಿದ್ದರು.ಜಿತುಭಾ, ಜಹುಭಾ, ದಲ್ಪುಜಿ ಸೇರಿದಂತೆ ಹಲವರ ಹೆಸರುಗಳು ಮುನ್ನೆಲೆಗೆ ಬಂದಿದ್ದವು. ದೇವಾಲಯದ ದೇಣಿಗೆ ಸಂಬಂಧಿಸಿದ ವಿವಾದವೇ ಹಿಂಸಾಚಾರದ ಮೂಲವಾಗಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 19, 2026 01:50 PM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More