ಮಂಡ್ಯ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದ ಬಾಲಕನ ಬಟ್ಟೆ ಬಿಚ್ಚಿಸಿದ ಭದ್ರತಾ ಸಿಬ್ಬಂದಿ

ವಿವೇಕ ಬಿರಾದಾರ

|

Updated on:Mar 12, 2023 | 11:40 AM

ಬೆಂಗಳೂರು-ಮೈಸೂರು ಎಕ್ಸಪ್ರೆಸ್​​ವೇಯನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯಕ್ಕೆ ಆಗಮಿಸಿದ್ದು, ಕಾರ್ಯಕ್ರಮ ವೀಕ್ಷಣೆಗೆ ಬಂದ ಬಾಲಕನ ಬಟ್ಟೆಯನ್ನು ಪೊಲೀಸರು ಬಿಚ್ಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು-ಮೈಸೂರು ಎಕ್ಸಪ್ರೆಸ್​​ವೇಯನ್ನು ಉದ್ಘಾಟಿಸಲು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಗೆ ಆಗಮಿಸಿದ್ದಾರೆ. ಈ ಹಿನ್ನೆಲೆ ಕಾರ್ಯಕ್ರಮದ ವೇದಿಕೆ ಸುತ್ತಲು ಬಿಗಿ ಪೊಲೀಸ್​ ಬಂದೋಬಸ್ತ ಮಾಡಲಾಗಿದೆ. ಹಾಗೆಯೇ ಕಾರ್ಯಕ್ರಮಕ್ಕೆ ಆಗಮಿಸುವ ಜನರನ್ನು ಪರಿಶೀಲಿಸಲಾಗುತ್ತಿದೆ. ಈ ವೇಳೆ ತಾಯಿಯೊಬ್ಬರು ಬಾಲಕನನ್ನು ಕರೆದುಕೊಂಡು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸರು ತಪಾಸಣೆ ವೇಳೆ ಮಗುವಿನ ಬಟ್ಟೆ ಬಿಚ್ಚಿಸಿದ್ದಾರೆ. ಬಾಲಕ ಕಪ್ಪು ಟಿಶರ್ಟ್​​ ಧರಿಸಿದ ಹಿನ್ನೆಲೆ ಬಟ್ಟೆ ಬಿಚ್ಚಲಾಗಿದೆ.

Follow us on

Click on your DTH Provider to Add TV9 Kannada