ತಾಂಬೂಲ ಪ್ರಶ್ನೆಗೆ ಮೊದಲು ಮಳಲಿ ದರ್ಗಾ ಮತ್ತು ರಾಮಾಂಜನೇಯ ಭಜನಾ ದೇವಸ್ಥಾನಕ್ಕೆ ಪೊಲೀಸ್ ಸರ್ಪಗಾವಲು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 25, 2022 | 9:45 PM

ಕರ್ನಾಟಕ ರಾಜ್ಯ ಮೀಸಲು ಪಡೆಯ (ಕೆ ಎಸ್ ಆರ್ ಪಿ) ಎರಡು ತುಕುಡಿಗಳನ್ನು ಮಂದಿರ ಮತ್ತು ದರ್ಗಾದ ಸುತ್ತ ನಿಯೋಜಿಸಲಾಗಿತ್ತು. ಕೆ ಎಸ್ ಆರ್ ಪಿಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಿರುವುದನ್ನು ವಿಡಿಯೋ ನೋಡಬಹುದು.

Mangaluru:  ಮಂಗಳೂರಿನ ಹೊರವಲಯದಲ್ಲಿರುವ ಮಳಲಿ ಒಂದು ಪುಟ್ಟ ಗ್ರಾಮ ಮಾರಾಯ್ರೇ, ಆದರೆ ಈಗ ಅದರ ಹೆಸರು ರಾಜ್ಯದ ಎಲ್ಲಾ ಜನರಿಗೆ ಗೊತ್ತಾಗುತ್ತಿದೆ. ಇಲ್ಲಿರುವ ಮಸೀದಿಯನ್ನು ಜುಮಾ ಮಸೀದಿ (Juma Masjid) ಅಂತಾರೆ, ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ದರ್ಗಾ (Madani Dargah) ಅಂತಾನೂ ಕರೆಯುತ್ತಾರೆ. ಕಳೆದ ತಿಂಗಳು ಅಂದರೆ ಏಪ್ರಿಲ್ 21 ರಿಂದ ಈ ದರ್ಗಾದ ಹೆಸರು ಸುದ್ದಿಯಲ್ಲಿದೆ. ದರ್ಗಾದ ನವೀಕರಣಕ್ಕೆಂದು (renovation) ಅದರ ಒಂದು ಭಾಗವನ್ನು ಒಡೆಯಲಾಗಿದೆ. ಆ ಭಾಗ ನೆಲಸಮಗೊಂಡಾಗ ಅಲ್ಲಿ ಹಿಂದೂ ದೇವಾಲಯದ ಕುರುಹುಗಳು ಕಂಡಿವೆ. ಹಾಗಾಗಿ ಅಲ್ಲಿ ಮೊದಲು ಹಿಂದೂ ದೇವಸ್ಥಾನವಿತ್ತು, ಅದನ್ನು ಕೆಡವಿ ಮಸೀದಿ ಕಟ್ಟಲಾಗಿದೆ ಅಂತ ವಿಶ್ವ ಹಿಂದೂ ಪರಿಷತ್ ಸದಸ್ಯರು ದಾವೆ ಹೂಡುತ್ತಿದ್ದಾರೆ.

ದೇವಾಲಯವಿತ್ತೇ ಅನ್ನುವುದನ್ನು ಖಚಿತಪಡಿಸಿಕೊಳ್ಳಲು ಮಳಲಿಯ ಅದೇ ದರ್ಗಾದ ಪಕ್ಕದಲ್ಲಿರುವ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಏರ್ಪಡಿಸಿ ಕೇರಳದ ಖ್ಯಾತ ಜ್ಯೋತಿಷಿ ಬಿಪಿ ಗೋಪಾಲಾಕೃಷ್ಣ ಫಣಿಕ್ಕರ್ ಅವರನ್ನು ಕರೆಸಲಾಗಿತ್ತು. ಮಂದಿರ-ಮಸೀದಿ ವಿವಾದ ಈಗಾಗಲೇ ಶುರುವಾಗಿರುವುದರಿಂದ ಮತ್ತು ಮಂಗಳೂರು ಸೂಕ್ಷ್ಮ ಪ್ರದೇಶ ಅನಿಸಿಕೊಂಡಿರುವುದರಿಂದ ದರ್ಗಾ ಮತ್ತು ಭಜನಾ ಮಂದಿರಗಳಿಗೆ ಭಾರಿ ಭದ್ರತೆ ಕಲ್ಪಿಸಲಾಗಿತ್ತು.

ಕರ್ನಾಟಕ ರಾಜ್ಯ ಮೀಸಲು ಪಡೆಯ (ಕೆ ಎಸ್ ಆರ್ ಪಿ) ಎರಡು ತುಕುಡಿಗಳನ್ನು ಮಂದಿರ ಮತ್ತು ದರ್ಗಾದ ಸುತ್ತ ನಿಯೋಜಿಸಲಾಗಿತ್ತು. ಕೆ ಎಸ್ ಆರ್ ಪಿಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಿರುವುದನ್ನು ವಿಡಿಯೋ ನೋಡಬಹುದು. ಮಳಲಿ ಗ್ರಾಮದ ಸೌಂದರ್ಯ ನಮ್ಮ ಗಮನ ಸೆಳೆಯುತ್ತದೆ ಮಾರಾಯ್ರೇ. ವಿಡಿಯೋನಲ್ಲಿ ದರ್ಗಾ ಕಾಣುತ್ತಿಲ್ಲ. ದೇವಸ್ಥಾನವನ್ನು ನೋಡಬಹುದು, ಬಹಳ ಸುಂದರವಾಗಿ ಅದನ್ನು ನಿರ್ಮಿಸಲಾಗಿದೆ. ಸುತ್ತ ಹಸಿರು ಹುಲ್ಲುಗಾವಲು, ತೆಂಗಿನ ಮರಗಳು, ಕಿರಿದಾದರೂ ಸ್ವಚ್ಛವಾಗಿರುವ ರಸ್ತೆ ಎಲ್ಲವೂ ಮನಸ್ಸಿಗೆ ಮುದ ನೀಡುತ್ತವೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.