Mysuru: ಮಾಜಿ ಮುಖ್ಯಮಂತ್ರಿಗಳಾಗಿರುವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಸಿದ್ದರಾಮಯ್ಯನವರ (Siddaramaiah) ನಡುವೆ ಕೋಳಿ ಜಗಳ ನಿಲ್ಲದು ಅಂತ ಕಾಣುತ್ತದೆ. ಬುಧವಾರ ವಿಧಾನ ಪರಿಷತ್ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿ ರಾಮುಗೆ ಬಿ ಫಾರ್ಮ್ (B form) ನೀಡಲಿ ಮೈಸೂರಿಗೆ ಆಗಮಿಸಿದ್ದ ಕುಮಾರಸ್ವಾಮಿ ಅವರು ಮಾಧ್ಯಮದವರೊಂದಿಗೆ ಮಾತಾಡುವಾಗ ತಾವು ಮಂಡ್ಯವನ್ನು ಯಾಕೆ ಅಭಿವೃದ್ಧಿ ಮಾಡಲಾಗಿಲ್ಲ ಅಂತ ವಿವರಿಸಿದರು. ಕಾವೇರಿ ನೀರಿಗಾಗಿ ಹೋರಾಟ ಮಾಡಿದ್ದು ನಾವು, ಕೆ ಅರ್ ಪೇಟೆ, ಪಾಂಡವಪುರ ಮತ್ತು ನಾಗಮಂಗಲದ ಜನರಿಗೆ ಹೇರಳವಾಗಿ ನೀರು ಸಿಗುತ್ತಿದ್ದರೆ ಅದಕ್ಕೆ ದೇವೇಗೌಡರು ಕಾರಣ, ಸಿದ್ದರಾಮಯ್ಯ ನೀರಿಗಾಗಿ ಹೋರಾಟ ಮಾಡಿಲ್ಲ ಎಂದು ಹೇಳಿದರು.
ಹಾಸನ ಅಭಿವೃದ್ಧಿ ಮಾಡಿದ್ದೀರಿ ಅದರೆ ಮಂಡ್ಯವನ್ನು ಕಡೆಗಣಿಸಿದ್ದೀರಿ ಅಂತ ಜನ ಹೇಳುತ್ತಿದ್ದಾರೆ ಅಂತ ಮಾಧ್ಯಮದವರು ಕೇಳಿದಾಗ, ಮಂಡ್ಯದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಗೊಂಡಾಗಲೇ ನಮ್ಮ ಸರ್ಕಾರವನ್ನು ಉರುಳಿಸಲಾಯಿತು, ಇನ್ನಾರು ತಿಂಗಳು ಸರ್ಕಾರ ಮುಂದುವರಿಯಲು ಬಿಟ್ಟಿದ್ದರೆ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸುತ್ತಿದ್ದೆ. ಆದಾಗ್ಯೂ, 2006-07 ರಲ್ಲಿ ತಾವು ಮುಖ್ಯಮಂತ್ರಿಯಗಿದ್ದಾಗ ಕಾರ್ಖಾನೆಗಳಿಗೆ 400 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದ್ದು, ಲೋಕೋಪಯೋಗಿ ಇಲಾಖೆ ವತಿಯಿಂದ ಕಟ್ಟಡಗಳನ್ನು ನಿರ್ಮಿಸಿದ ಬಗ್ಗೆ ಅವರು ಹೇಳಿದರು.
ಪರಿಷತ್ ಚುನಾವಣೆಯನ್ನ ತಮ್ಮ ಕಾರ್ಯಕರ್ತರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆಂದು ಹೇಳಿದ ಕುಮಾರಸ್ವಾಮಿಯವರು ತಾವು ಕೂಡ ಹಾಸನ, ಮೈಸೂರು ಮತ್ತು ಮಂಡ್ಯಗಳಲ್ಲಿ ನಡೆಯುವ ಸಭೆಗಳಲ್ಲಿ ಭಾಗವಹಿಸುವುದಾಗಿ ಹೇಳಿದರು. ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಪಕ್ಷದ ಅಧ್ಯಕ್ಷ ಸಿ ಎಂ ಇಬ್ರಾಹಿಂ ಆಗಮಿಸಲಿದ್ದಾರೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.